Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ವಸುದೇವತನಯನಿಗೆ hayavadana JAYA MANGALAM NITYA SHUBHA MANGALAM VASUDEVA TANAYANIGE. Show all posts
Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ವಸುದೇವತನಯನಿಗೆ hayavadana JAYA MANGALAM NITYA SHUBHA MANGALAM VASUDEVA TANAYANIGE. Show all posts

Friday, 10 December 2021

ಜಯ ಮಂಗಳಂ ನಿತ್ಯ ಶುಭ ಮಂಗಳಂ ವಸುದೇವತನಯನಿಗೆ hayavadana JAYA MANGALAM NITYA SHUBHA MANGALAM VASUDEVA TANAYANIGE

csr

ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||

ವಸುದೇವ ತನಯನಿಗೆ ವೈಕುಂಠ ನಿಲಯನಿಗೆ |

ಕುಸುಮನಾಭನಿಗೆ ಕೋಮಲರೂಪಗೆ |

ಯಶೋದೆ ನಂದನಗೆ ವಸುಧೆಯ ರಮಣನಿಗೆ |

ನಸುನಗೆಯೊಳೊಪ್ಪುವ ನರಸಿಂಹಗೆ ||೧||

ಕನಕಕಿರೀಟನಿಗೆ ಕಸ್ತೂರಿ ತಿಲಕನಿಗೆ |

ಕನಕಕುಂಡಲನಿಗೆ ಕೌಸ್ತುಭಹಾರಗೆ |

ಕನಕಾಂಬರನಿಗೆ ಕಾರುಣ್ಯರೂಪನಿಗೆ |

ಸನಕಾದಿವಂದ್ಯನಿಗೆ ನರಸಿಂಹಗೆ ||೨||

ಪಂಕಜ ನಾಭನಿಗೆ ಪಾಂಚಾಲಿ ರಕ್ಷಕಗೆ |

ಲಂಕೆಯನು ವಿಭೀಷಣ ನಿಗಿತ್ತವಗೆ |

ಕುಂಕುಮಾಂಕಿತನಿಗೆ ಕುವಲಯ ನೇತ್ರನಿಗೆ |

ಬಿಂಕದಿಂದಲಿ ಮೆರೆವ ನರಸಿಂಹಗೆ ||೩||

ಪಕ್ಷಿವಾಹನನಿಗೆ ಪರಮಪಾವನನಿಗೆ |

ಕುಕ್ಷಿಯೊಳು ಜಗವನಿಂಬಿಟ್ಟವನಿಗೆ |

ಲಕ್ಷುಮೀ ಕಾಂತನಿಗೆ ಲಕ್ಷಣವಂತನಿಗೆ |

ಲಕ್ಷಣ ದೊಳೊಪ್ಪುವ ನರಸಿಂಹಗೆ ||೪||

ಭಕ್ತವತ್ಸಲನಿಗೆ ಭವದು:ಖದೂರನಿಗೆ |

ಮುಕ್ತಿದಾಯಕಗೆ ಚಿನ್ಮಯ ರೂಪಗೆ |

ಮಿತ್ರೆ ರುಕ್ಮಿಣಿಗೆ ಸತ್ಯಭಾಮೆ ಯರಸನಿಗೆ |

ನಿತ್ಯ ಕಲ್ಯಾಣ ಶ್ರೀಹಯವದನಗೆ ||೫||
***

.
jaya maMgaLaM nitya SuBa maMgaLaM ||pa||

vasudEva tanayanige vaikuMTha nilayanige |
kusumanABanige kOmalarUpage |
yaSOde naMdanage vasudheya ramaNanige |
nasunageyoLoppuva narasiMhage ||1||

kanakakirITanige kastUri tilakanige |
kanakakuMDalanige kaustuBahArage |
kanakAMbaranige kAruNyarUpanige |
sanakAdivaMdyanige narasiMhage ||2||

paMkaja nABanige pAMcAli rakShakage |
laMkeyanu viBIShaNa nigittavage |
kuMkumAMkitanige kuvalaya nEtranige |
biMkadiMdali mereva narasiMhage ||3||

pakShivAhananige paramapAvananige |
kukShiyoLu jagavaniMbiTTavanige |
lakShumI kAMtanige lakShaNavaMtanige |
lakShaNa doLoppuva narasiMhage ||4||

Baktavatsalanige Bavadu:KadUranige |
muktidAyakage cinmaya rUpage |
mitre rukmiNige satyaBAme yarasanige |
nitya kalyANa SrIhayavadanage ||5||
***

pallavi

jaya mangaLam nitya shubha mangaLam

caraNam 1

vasudEva tanayanige vaikuNTha nilayanige kusuma nAbhanige kOmala rUpage
yashOde nandanage vasudheya ramaNanige nasuna geyoLoppuva narasimhage

caraNam 2

kanaka kirITanige kastUri tilakanige kanaka kuNBDalanige kaustubha hArage
kanakAmbaranige kAruNya rUpanige sanakAdi munivandya(sanakAdivandyanige) narasimhage

caraNam 3

pankaja nAbhanige pAncAli rakSakage lankeyanu vibhIShaNanigittavage
kumkumAnkitanige kuvalayanEtranige binkadindali mereva narasimhage

caraNam 4

pakSivAhananige paramapAvananige kukSiyoLu jagavaninbiTTavanige
lakSumI kAntanige lakSaNavantanige lakSaNa doLoppuva narasimhage

caraNam 5

bhaktavatsalanige bhavaduhkha dUranige muktidAyakage cinmaya rUpage
mitre rukmiNige satyabhAmeyarasanige nityakalyANa shrI hayavadanage
***

ಜಯ ಮಂಗಳಂ ನಿತ್ಯ ಶುಭ ಮಂಗಳಂ  ।।ಪ ।।


ವಸುದೇವತನಯನಿಗೆ  ವೈಕುಂಠನಿಲಯನಿಗೆ
ಕುಸುಮನಾಭನಿಗೆ   ಕೋಮಲರೂಪಗೆ ।

ಯಶೋದೆಯ ನಂದನಿಗೆ  ವಸುಧೆಯ ರಮಣನಿಗೆ
ನಸುನಗೆಯೊಳ್ಳೊಪ್ಪುವ  ನರಸಿಂಹಗೆ ।।
                                                  ।।ಜಯ ಮಂಗಳಂ।।

ಪಕ್ಷಿವಾಹನನಿಗೆ ಪರಮಪಾವನನಿಗೆ
ಕುಕ್ಷಿಯೊಳು  ಜಗವನಿಂಬಿಟ್ಟವನಿಗೆ ।
ಲಕ್ಷುಮಿಕಾಂತನಿಗೆ  ಲಕ್ಷಣವಂತನಿಗೆ
ಲಕ್ಷಣದೊಳ್ಳೊಪ್ಪುವ  ನರಸಿಂಹಗೆ ।।
                                             ।। ಜಯ ಮಂಗಳಂ।।

ಭಕ್ತವತ್ಸಲನಿಗೆ  ಭವದುಃಖದೂರನಿಗೆ
ಮುಕ್ತಿದಾಯಕಗೆ ಚಿನ್ಮಯರೂಪಗೆ ।
ಮಿತ್ರೇ  ರುಕ್ಮಿಣಿಗೆ  ಸತ್ಯಭಾಮೆಯರಸನಿಗೆ
ನಿತ್ಯಕಲ್ಯಾಣ  ಶ್ರೀಹಯವದನಗೆ ।।
                                           ।।ಜಯ ಮಂಗಳಂ।।
***

ರಾಗ : ಭೈರವಿ    ತಾಳ : ಆದಿ (raga, taala may differ in audio)