csr
ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||
ವಸುದೇವ ತನಯನಿಗೆ ವೈಕುಂಠ ನಿಲಯನಿಗೆ |
ಕುಸುಮನಾಭನಿಗೆ ಕೋಮಲರೂಪಗೆ |
ಯಶೋದೆ ನಂದನಗೆ ವಸುಧೆಯ ರಮಣನಿಗೆ |
ನಸುನಗೆಯೊಳೊಪ್ಪುವ ನರಸಿಂಹಗೆ ||೧||
ಕನಕಕಿರೀಟನಿಗೆ ಕಸ್ತೂರಿ ತಿಲಕನಿಗೆ |
ಕನಕಕುಂಡಲನಿಗೆ ಕೌಸ್ತುಭಹಾರಗೆ |
ಕನಕಾಂಬರನಿಗೆ ಕಾರುಣ್ಯರೂಪನಿಗೆ |
ಸನಕಾದಿವಂದ್ಯನಿಗೆ ನರಸಿಂಹಗೆ ||೨||
ಪಂಕಜ ನಾಭನಿಗೆ ಪಾಂಚಾಲಿ ರಕ್ಷಕಗೆ |
ಲಂಕೆಯನು ವಿಭೀಷಣ ನಿಗಿತ್ತವಗೆ |
ಕುಂಕುಮಾಂಕಿತನಿಗೆ ಕುವಲಯ ನೇತ್ರನಿಗೆ |
ಬಿಂಕದಿಂದಲಿ ಮೆರೆವ ನರಸಿಂಹಗೆ ||೩||
ಪಕ್ಷಿವಾಹನನಿಗೆ ಪರಮಪಾವನನಿಗೆ |
ಕುಕ್ಷಿಯೊಳು ಜಗವನಿಂಬಿಟ್ಟವನಿಗೆ |
ಲಕ್ಷುಮೀ ಕಾಂತನಿಗೆ ಲಕ್ಷಣವಂತನಿಗೆ |
ಲಕ್ಷಣ ದೊಳೊಪ್ಪುವ ನರಸಿಂಹಗೆ ||೪||
ಭಕ್ತವತ್ಸಲನಿಗೆ ಭವದು:ಖದೂರನಿಗೆ |
ಮುಕ್ತಿದಾಯಕಗೆ ಚಿನ್ಮಯ ರೂಪಗೆ |
ಮಿತ್ರೆ ರುಕ್ಮಿಣಿಗೆ ಸತ್ಯಭಾಮೆ ಯರಸನಿಗೆ |
ನಿತ್ಯ ಕಲ್ಯಾಣ ಶ್ರೀಹಯವದನಗೆ ||೫||
***
.
jaya maMgaLaM nitya SuBa maMgaLaM ||pa||
vasudEva tanayanige vaikuMTha nilayanige |
kusumanABanige kOmalarUpage |
yaSOde naMdanage vasudheya ramaNanige |
nasunageyoLoppuva narasiMhage ||1||
kanakakirITanige kastUri tilakanige |
kanakakuMDalanige kaustuBahArage |
kanakAMbaranige kAruNyarUpanige |
sanakAdivaMdyanige narasiMhage ||2||
paMkaja nABanige pAMcAli rakShakage |
laMkeyanu viBIShaNa nigittavage |
kuMkumAMkitanige kuvalaya nEtranige |
biMkadiMdali mereva narasiMhage ||3||
pakShivAhananige paramapAvananige |
kukShiyoLu jagavaniMbiTTavanige |
lakShumI kAMtanige lakShaNavaMtanige |
lakShaNa doLoppuva narasiMhage ||4||
Baktavatsalanige Bavadu:KadUranige |
muktidAyakage cinmaya rUpage |
mitre rukmiNige satyaBAme yarasanige |
nitya kalyANa SrIhayavadanage ||5||
***
pallavi
jaya mangaLam nitya shubha mangaLam
caraNam 1
vasudEva tanayanige vaikuNTha nilayanige kusuma nAbhanige kOmala rUpage
yashOde nandanage vasudheya ramaNanige nasuna geyoLoppuva narasimhage
caraNam 2
kanaka kirITanige kastUri tilakanige kanaka kuNBDalanige kaustubha hArage
kanakAmbaranige kAruNya rUpanige sanakAdi munivandya(sanakAdivandyanige) narasimhage
caraNam 3
pankaja nAbhanige pAncAli rakSakage lankeyanu vibhIShaNanigittavage
kumkumAnkitanige kuvalayanEtranige binkadindali mereva narasimhage
caraNam 4
pakSivAhananige paramapAvananige kukSiyoLu jagavaninbiTTavanige
lakSumI kAntanige lakSaNavantanige lakSaNa doLoppuva narasimhage
caraNam 5
bhaktavatsalanige bhavaduhkha dUranige muktidAyakage cinmaya rUpage
mitre rukmiNige satyabhAmeyarasanige nityakalyANa shrI hayavadanage
***
ಜಯ ಮಂಗಳಂ ನಿತ್ಯ ಶುಭ ಮಂಗಳಂ ।।ಪ ।।
ವಸುದೇವತನಯನಿಗೆ ವೈಕುಂಠನಿಲಯನಿಗೆ
ಕುಸುಮನಾಭನಿಗೆ ಕೋಮಲರೂಪಗೆ ।
ಯಶೋದೆಯ ನಂದನಿಗೆ ವಸುಧೆಯ ರಮಣನಿಗೆ
ನಸುನಗೆಯೊಳ್ಳೊಪ್ಪುವ ನರಸಿಂಹಗೆ ।।
।।ಜಯ ಮಂಗಳಂ।।
ಪಕ್ಷಿವಾಹನನಿಗೆ ಪರಮಪಾವನನಿಗೆ
ಕುಕ್ಷಿಯೊಳು ಜಗವನಿಂಬಿಟ್ಟವನಿಗೆ ।
ಲಕ್ಷುಮಿಕಾಂತನಿಗೆ ಲಕ್ಷಣವಂತನಿಗೆ
ಲಕ್ಷಣದೊಳ್ಳೊಪ್ಪುವ ನರಸಿಂಹಗೆ ।।
।। ಜಯ ಮಂಗಳಂ।।
ಭಕ್ತವತ್ಸಲನಿಗೆ ಭವದುಃಖದೂರನಿಗೆ
ಮುಕ್ತಿದಾಯಕಗೆ ಚಿನ್ಮಯರೂಪಗೆ ।
ಮಿತ್ರೇ ರುಕ್ಮಿಣಿಗೆ ಸತ್ಯಭಾಮೆಯರಸನಿಗೆ
ನಿತ್ಯಕಲ್ಯಾಣ ಶ್ರೀಹಯವದನಗೆ ।।
।।ಜಯ ಮಂಗಳಂ।।
***
ವಸುದೇವತನಯನಿಗೆ ವೈಕುಂಠನಿಲಯನಿಗೆ
ಕುಸುಮನಾಭನಿಗೆ ಕೋಮಲರೂಪಗೆ ।
ಯಶೋದೆಯ ನಂದನಿಗೆ ವಸುಧೆಯ ರಮಣನಿಗೆ
ನಸುನಗೆಯೊಳ್ಳೊಪ್ಪುವ ನರಸಿಂಹಗೆ ।।
।।ಜಯ ಮಂಗಳಂ।।
ಪಕ್ಷಿವಾಹನನಿಗೆ ಪರಮಪಾವನನಿಗೆ
ಕುಕ್ಷಿಯೊಳು ಜಗವನಿಂಬಿಟ್ಟವನಿಗೆ ।
ಲಕ್ಷುಮಿಕಾಂತನಿಗೆ ಲಕ್ಷಣವಂತನಿಗೆ
ಲಕ್ಷಣದೊಳ್ಳೊಪ್ಪುವ ನರಸಿಂಹಗೆ ।।
।। ಜಯ ಮಂಗಳಂ।।
ಭಕ್ತವತ್ಸಲನಿಗೆ ಭವದುಃಖದೂರನಿಗೆ
ಮುಕ್ತಿದಾಯಕಗೆ ಚಿನ್ಮಯರೂಪಗೆ ।
ಮಿತ್ರೇ ರುಕ್ಮಿಣಿಗೆ ಸತ್ಯಭಾಮೆಯರಸನಿಗೆ
ನಿತ್ಯಕಲ್ಯಾಣ ಶ್ರೀಹಯವದನಗೆ ।।
।।ಜಯ ಮಂಗಳಂ।।
***
ರಾಗ : ಭೈರವಿ ತಾಳ : ಆದಿ (raga, taala may differ in audio)
No comments:
Post a Comment