csrchs
ಶೋಭನವೇ ಇದು ಶೋಭನವೇ ॥ ಪ ॥
ವೈಭವವೇ ನಮ್ಮ ವಾಮನಮೂರ್ತಿಗೆ ॥ ಅ ಪ ॥
ಪಾಲಗಡಲು ಮನೆಯಾಗಿರಲು |
ಆಲದೆಲೆಯ ಮೇಲೆ ಮಲಗುವರೇ ॥
ಮೂರ್ಲೋಕವು ನಿನ್ನುದರಲಿಂಬಿಟ್ಟು ಮುದ್ದು ।
ಬಾಲಕನಾಗಿ ಎತ್ತಿಸಿಕೊಂಬರೇ ॥ 1 ॥
ಸಿರಿ ನಿನ್ನ ಕೈವಶವಾಗಿರಲು |
ತಿರಿವರೇ ಬಲಿಯ ದಾನವ ಬೇಡಿ ॥
ಸರಸಿಜಭವ ನಿನ್ನ ಸ್ತುತಿಮಾಡುತಲಿರೆ |
ನರನ ಬಂಡಿಯ ಬೋವನಾಗುವರೇ ॥2॥
ಕಮ್ಮಗೋಲನ ಪಿತನಾಗಿರಲು |
ಸುಮ್ಮನೆ ಕುಬುಜಗೆ ಸೋಲುವರೇ ॥
ಬೊಮ್ಮಮೂರುತಿ ನಿನಗೆಣೆಯುಂಟೇ ತ್ರಿಜಗದಿ |
ಹಮ್ಮಿನ ದೇವ ಪುರಂದರ ವಿಠಲ ॥3॥
*****
ರಾಗ ಸೌರಾಷ್ಟ್ರ. ಆದಿ ತಾಳ (raga, taala may differ in audio)
Shobhanave idhu shobhanave
Vaibhavave Namma Vamana Murthige
Charana Palagadalu Maneyagiralu |
Aaladeya Mele Malaguvare ||1||
Muurlokava Ninudardolimbittu |
Muddu Balakanagi Yettisikombare ||2||
Siri Ninna Kaivashavagiralu |
Tirivare Baliya Danava Bedi ||3||
Sarasijabhava Nimma Puje Madutalire|
Narana Bandiya Bovanaaguvare ||4||
Kammugolana Pitanagiralu |
Summane Kuchijege Soluvare ||5||
Bomma Muruthi Ninnageneyunte Trijagadi |
Hammina Deva Purandara Vittala||6||
***
pallavi
shObhanavE idu shObhanavE
P: shObhanavE idu shObhanavE
A: vaibhavavE namma vAmana mUrtige
C!: pAlugaDalu maneyoLagiralu ondAladeleya mEle malaguvare
mUrlOkava ninnutaradoLimbiTTu muddu bAlakanAgi ettisi kombare
caraNam 2
siri ninna kai vashavAgiralu tirivare baliya dAnava bEDi
sarasijabhava ninna pUje mADutlire narana baNDiya pOvanAguvre
caraNam 3
kammagOlana pitanAgiralu summane kubujage sOluvare
bomma mUruti ninageNeyuNTe trijagadi hammina dEva purandara viTTala
***
shobhana by purandara dasa
ಶೋಭನವೇ ಇದು ಶೋಭನವೇ ||ಪ||
ವೈಭವವೇ ನಮ್ಮ ವಾಮನಮೂರ್ತಿಗೆ ||
ಪಾಲುಗಡಲು ಮನೆಯಾಗಿರಲು
ಆಲದೆಲೆಯ ಮೇಲೆ ಮಲಗುವರೆ
ಮೂರ್ಲೋಕವ ನಿನ್ನುದರದೊಳಿಂಬಿಟ್ಟು ಮುದ್ದು-
ಬಾಲಕನಾಗಿ ಎತ್ತಿಸಿಕೊಂಬರೆ ||
ಸಿರಿ ನಿನ್ನ ಕೈವಶವಾಗಿರಲು
ತಿರಿವರೆ ಬಲಿಯ ದಾನವ ಬೇಡಿ
ಸರಸಿಜಭವ ನಿನ್ನ ಪೂಜೆ ಮಾಡುತಲಿರೆ
ನರನ ಬಂಡಿಯ ಬೋವನಾಗುವರೆ ||
ಕಮ್ಮಗೋಲನ ಪಿತನಾಗಿರಲು
ಸುಮ್ಮನೆ ಕುಬುಜೆಗೆ ಸೋಲುವರೆ
ಬೊಮ್ಮ ಮೂರುತಿ ನಿನಗೆಣೆಯುಂಟೆ ತ್ರಿಜಗದಿ
ಹಮ್ಮಿನ ದೇವ ಪುರಂದರವಿಠಲ ||
***
No comments:
Post a Comment