Showing posts with label ಈತನೇ ಕಾಣಿರೊ ಮಧ್ವಮುನಿ hayavadana EETANE KAANIRO MADHWAMUNI MADHWACHARYA STUTIH. Show all posts
Showing posts with label ಈತನೇ ಕಾಣಿರೊ ಮಧ್ವಮುನಿ hayavadana EETANE KAANIRO MADHWAMUNI MADHWACHARYA STUTIH. Show all posts

Saturday, 11 December 2021

ಈತನೇ ಕಾಣಿರೊ ಮಧ್ವಮುನಿ ankita hayavadana EETANE KAANIRO MADHWAMUNI MADHWACHARYA STUTIH



ಶ್ರೀ ವಾದಿರಾಜರ ಕೃತಿ 


ಈತನೆ ಕಾಣಿರೊ ಮಧ್ವಮುನಿ ॥ ಪ ॥

ಪರಿಪರಿ ಶ್ರುತಿಗಳೆಂಬ ಗುಹೆಗಳಲ್ಲಿ ಕೇ- ।
ಸರಿಯಂತೆ ಚರಿಸುತ್ತ ॥
ಹರಿಯೇ ಸರ್ವೋತ್ತಮನೆಂಬ ಘೋಷಗಳಿಂದ ।
ದುರುಳ ವಾದಿಗಳೆಂಬ ನರಿಗಳೋಡಿಸಿದಾತ ॥ 1 ॥

ಸಕಲಾಗಮಗಳೆಂಬ ಶರಧಿಯೊಳಗೆ ।
ಯುಕುತಿಯಿಂದಲಿ ಮಥಿಸಿ ॥
ಅಕಳಂಕ ಶ್ರೀಹರಿಯೆಂಬ ರತ್ನವ ಕಂಡು ।
ಮಕುಟದೊಳಿಟ್ಟು ಲೋಕದಿ ಮೆರೆಸಿದಾತ ॥ 2 ॥

ವೇದಸಾರವೆಂಬ ಈಶತತ್ತ್ವವಾದ ।
ಅಮೃತವನೆ ಕಲ್ಪಿಸಿ ॥
ಆದಿಮೂರುತಿ ಶ್ರೀಹಯವದನನ ದಿವ್ಯ - ।
ಪಾದಸೇವಕನಾದ ಮಧ್ವಮುನಿಯೆಂಬಾತ ॥ 3 ॥
****


 ರಾಗ ಕಾಪಿ    ಆದಿತಾಳ (raga, taala may differ in audio)

Itane kaniro madhwamuni || pa ||

Paripari sutigalemba guhegalalli ke sariyante
Charisutta hariye sarvottamanemba
Goshagalinda durulavadigalemba narigalodisidata || 1 ||

Sakalagamagalemba saradhiyolage
Mukutiyali mathisi akalanka srihariyemba
Ratnava kandu mukutadolagittu lokadi meredata || 2 ||

Vedasaranemba isatatta vada sude ya kalpisikondu
Adimuruti srihayavadanana divsa
Padasevakanada madhvamuniyembata || 3 ||
***

ಈತನೆ ಕಾಣಿರೊ ಮಧ್ವಮುನಿ ||

ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ-ಸರಿಯಂತೆ
ಚರಿಸುತ್ತಹರಿಯೆ ಸರ್ವೋತ್ತಮನೆಂಬ
ಘೋಷಗಳಿಂದದುರುಳ ವಾದಿಗಳೆಂಬ ನರಿಗಳೋಡಿಸಿದಾತ ||

ಸಕಲಾಗಮಗಳೆಂಬ ಶರಧಿಯೊಳಗೆ
ಯುಕುತಿಯಿಂದಲಿ ಮಥಿಸಿಅಕಳಂಕ ಶ್ರೀಹರಿಯೆಂಬ
ರತ್ನವ ಕಂಡುಮಕುಟದೊಳಿಟ್ಟು ಲೋಕದಿ ಮೆರೆಸಿದಾತ ||

ವೇದಸಾರವೆಂಬ ಈಶತತ್ವವಾದಸುಧೆಯ ಕಲ್ಪಿಸಿಕೊಂಡು
ಆದಿಮೂರುತಿ ಶ್ರೀ ಹಯವದನನ ದಿವ್ಯ
ಪಾದ ಸೇವಕನಾದ ಮಧ್ವಮುನಿಯೆಂಬಾತ ||
******