Showing posts with label ನರರ ವಂಚಿಸಿದನೆಂದೆಂಬ ಪೌರುಷವೇಕೋ govinda. Show all posts
Showing posts with label ನರರ ವಂಚಿಸಿದನೆಂದೆಂಬ ಪೌರುಷವೇಕೋ govinda. Show all posts

Wednesday, 13 November 2019

ನರರ ವಂಚಿಸಿದನೆಂದೆಂಬ ಪೌರುಷವೇಕೋ ankita govinda

by ಗೋವಿಂದದಾಸ
ನರರ ವಂಚಿಸಿದನೆಂದೆಂಬ | ಪೌರುಷವೇಕೋ |ಹರಿಯ ವಂಚಿಸಲಸಾಧ್ಯವು | ನಿನಗೆ ಮರುಳೆ |ದುರುಳರೊಡನಾಟದಲಿ ದುಷ್ಟ ಕಾರ್ಯವಮಾಡು|ನರಕದಲಿ ಮುಳುಗಿಸುವ ಯಮನುನೋಡು ಪ 

ಮೂಢ ಮತಿ ಕೇಳ್ ನರಗೆ ನೋಡಲೆರಡೇ ಕಣ್ಣು |ಗಾಢ ನಿದ್ರೆಯೊಳದನು ಮುಚ್ಚಿ ಮಲಗುವನೂ |ಗಾಢಾಂಧಕಾರದಲಿ | ಸೊಡರ ಹೊರತು ಕಾಣದದು |ರೂಢಿಯೊಳು ಸಹಸ್ರಾಕ್ಷ | ನನು ಮೋಸಗೊಳಿಸುವಾ |ಪಾಡೇನ ಬಲ್ಲೆ ಮರುಳೇ1

ಎರಡೇಳು ಜಗವನ್ನು ಧರಿಸಿರುವ ಹೃದಯದಲಿ |ಗರುಡ ವಾಹನನಾಗಿ ಧರೆಯೊಳ್ ಚರಿಸುವನು |ತರಣಿಶಶಿನೇತ್ರನೆಂದೆನಿಸಿ ಸರ್ವವನೋಳ್ಪ |ಪರಮಾತ್ಮನಾಗಿ ಪ್ರಾಣಿಗಳ | ಹೃದಯದಲಿ |ಹರಿಯು ನೆಲೆಸಿರ್ಪ ಕೇಳು2

ಇಂದೋರ್ವನನು ಮೋಸಗೊಳಿಸಿದಾ ದೋಷವಿದು |ಎಂದೆಂದಿಗೂ ನಿನ್ನ ಬೆನ್ನ ಬಿಡದೂ |ನಿಂದಿಗನು ನರಜನಕೆ ಗೋವಿಂದನಿಗೆ ದ್ರೋಹೀ |ಎಂದೆನಿಸಿ ಯಮನ ಹಂಗಿಗನಾಗಬೇಡ ನಾಳೆ3
*********