Showing posts with label ಸರಸಿಜಾಲಯೆ ನಿಲಯೆ kamalanabha vittala. Show all posts
Showing posts with label ಸರಸಿಜಾಲಯೆ ನಿಲಯೆ kamalanabha vittala. Show all posts

Friday 27 December 2019

ಸರಸಿಜಾಲಯೆ ನಿಲಯೆ ankita kamalanabha vittala

by ನಿಡಗುರುಕಿ ಜೀವೂಬಾಯಿ
ಸರಸಿಜಾಲಯೆ ನಿಲಯೆ ಪ

ಸ್ಥಳದಲ್ಲಿ ನೆಲಸಿ ಸಜ್ಜನರ ರಕ್ಷಕಳೆಂದು ಅ.ಪ

ಕ್ಷೀರಸಾಗರಜಾತೆ ಮಾರನಯ್ಯನ ಪ್ರೀತೆಸಾರಸದಳನೇತ್ರೆಮಾರಮಣನ ಮನಸಾರ ಸೇವಿಪ ಮುದ್ದುಕೀರವಾಣಿಯ ಭಕ್ತಸ್ತೋಮ ರಕ್ಷಕಳೆಂದು 1

ಅಂಬುಧಿಶಯನ ಪೀತಾಂಬರಧಾರಿಯಶಂಖು ಚಕ್ರಾಂಕಿತಹರಿಶೌರಿಯಶಂಭರಾರಿಯ ಪಿತನ ನಂಬಿಸೇವಿಪ ಜಗ-ದಂಬ ನಿನ್ನಯ ಪಾದಾಂಬುಜಕ್ಕೆರಗುತ 2

ಪದ್ಮನಾಭನ ರಾಣಿ ಪದ್ಮ ಸಂಭವೆ ದೇವಿಪದ್ಮಾಕ್ಷಿ ಪದ್ಮ ಪಾಣಿಯೆ ಸುಂದರಿಪದ್ಮಾಸನನ ಮಾತೆ ಪದ್ಮಮುಖಿಯೆ ಹೃ-ತ್ಪದ್ಮದಿ ಹರಿಪಾದ ಪದ್ಮವ ತೋರೆಂದು 3

ಸಾರಸಾಕ್ಷಿಯೆ ಹರಿಯ ಆರಾಧಿಸುವ ಜನರ-ಪಾರದು:ಖವನೀಗಿಪೊರೆವೆಯೆಂದುಬಾರಿಬಾರಿಗು ನಿನ್ನಚಾರುದರ್ಶನವಿತ್ತುಕೋರಿದ ವರಗಳ ಬೀರಿ ಭಕ್ತರ ಕಾಯೆ 4

ಕರುಣದಿ ಭಕುತರ ಕರೆದು ಕಾಪಾಡುವಬಿರುದು ನಿನ್ನದು ತಾಯೆ ತ್ವರಿತದಿ ಕಾಯೆಕರುಣಿಸೆ ಕಮಲನಾಭ ವಿಠ್ಠಲನ ರಾಣಿಮರೆಯದೆ ಹರಿಯ ಧ್ಯಾನವ ಕೊಟ್ಟು ಸಲಹೆಂದು 5
********