..
ಮಲ್ಲೆ ಮಲ್ಲಿಗೆ ಕೋಲ ಝಲ್ಲಿ ಮುತ್ತಿನ ಕೋಲನಲ್ಲೆಯರು ನಲಿ ನಲಿದು ಚಲುವ ರಂಗನ ಪಾಡಿಉಲ್ಲಾಸ ಬಡುವ ಕೋಲ ಅಮ್ಮಯ್ಯ ಪ.
ನಾರಿ ರುಕ್ಮಿಣಿ ಮುದ್ದು ಚಾರು ವÀದನಳೆ ದಿವ್ಯಥೋರ ಕುಚಗಳ ಆ ಭಾರಕೆ ಬಳಕುವಳೆ ವಿಸ್ತಾರ ಜಘನಳೆ ಚಲ್ವಳೆ ಅಮ್ಮಯ್ಯ 1
ನಾರಿಕೇಲದಂತೆ ಕರಗಳೆ ಉರಗಳೆ ವರಜಾನು ಜಂಗಿಗಳ ಚರಣಗಳ ನಖಗಳಬೆರಳುಗಳಿಗೆ ಎರಗುವೆನು ಅಮ್ಮಯ್ಯ 2
ಅಂಬುಜಾ ಮುಖಿ ಭಾವೆ ಬಿಂಬಾಧರಳೆ ದಿವ್ಯಕುಂಭ ಕುಚ ಕಟಿ ಸಣ್ಣ ನಿತಂಬಿನಿಮೈ ಬಣ್ಣದ ವಿಸ್ತರಳೆ ಲತೆಯಂತೆ ತೋಳತೊಡೆ ರಂಭೆ ಕಂಬು ನಮ್ಮಯ್ಯ 3
ಅಂಬುಜಾಂಬಳ ಪಾದವೆಂಬೊ ಕಮಲಗಳಬೆರಳೆಂಬೊ ಹವಳಗಳ ನಖವೆಂಬೊ ಚಂದ್ರಗಳ ಸಂಭ್ರಮದಿ ಎರಗುವೆ ನಮ್ಮಯ್ಯ4
ಮಂದಗಮನೆಯರ ಮುಯ್ಯ ಸುಂದರ ತೋರುವದು ಚಂದ್ರ ಲೋಕದಲಿಲ್ಲ ನಾಗೇಂದ್ರ ಲೋಕದಲಿಲ್ಲ ಸಿಂಧು ಸಪ್ತದಿಗಂಧರ್ವ ಲೋಕದಲಿಲ್ಲ ಹಿಂದಿಲ್ಲ ಮುಂದಿಲ್ಲವೆಂದೆ ನಮ್ಮಯ್ಯ 5
ಮಂದಾರ ಗಿರಿಮೇರು ಮಂದಾರದÀಲೆ ಮೇಲೆಂಬೊ ಮಾರ್ಜನ ತಪ ಒಂದು ಲೋಕದಲಿಲ್ಲವೆಂದು ದ್ರೌಪತಿಗ್ಹೇಳಿ ಬಂದೆನಮ್ಮಯ್ಯ 6
ಮಿತ್ರೆಯರ ಮುಯ್ಯಕ್ಕೆ ಮತ್ತೆಲ್ಲಿ ಸರಿಯಿಲ್ಲ ಸತ್ಯಲೋಕದಲಿಲ್ಲಮೃತ್ಯು ಲೋಕದಲಿಲ್ಲ ಅತ್ಯಂತ ತೆಳಗಿಹೊ ರತ್ನ ಲೋಕದಲಿಲ್ಲಹತ್ತು ದೆಸೆಗಿಲ್ಲವೆಂದೇ ನಮ್ಮಯ್ಯ 7
ಭಕ್ತವತ್ಸಲ ಸ್ವಾಮಿ ಅತ್ಯಂತ ಪ್ರೇಮದಲೆ ಸತ್ಯಭಾಂವೆರ ಅರಸು ಅರ್ಥಿಲೆ ಬಂದದ್ದುಚಿತ್ತಕ್ಕೆ ತಾ ಎಂದೆ ನಮ್ಮಯ್ಯ 8
ವೈಭವದ ಮುಯ್ಯವು ವೈಕುಂಠದಲಿಲ್ಲ ಕೈವಲ್ಯವೆನಿಪ ಸೇತುದ್ವೀಪದೊಳಗಿಲ್ಲಭಯವಿಲ್ಲವೆನಿಪ ಅನಂತಾಸನದಲಿಲ್ಲಐವರ ಅರಸಿಗೆ ಹೇಳಿಬಂದೆನಮ್ಮಯ್ಯ 9
ಕೈವಲ್ಯಪತಿ ತಾನು ದಯಮಾಡಿ ಬಂದದ್ದುದಯವ ಬಹಳಮ್ಮ ಐವರದು ಎನುತಲೆ ಕೈಮುಗಿದು ಹೇಳಿ ಬಂದೆ ನಮ್ಮಯ್ಯ10
ನಲ್ಲೆಯರ ಮುಯ್ಯಕ್ಕೆ ಎಲ್ಲೆಲ್ಲೂ ಸರಿಯಿಲ್ಲ ಸಪ್ತದ್ವೀಪದಲಿಲ್ಲಮೇರುವಿನಲಿಲ್ಲ ಈ ಭಾಗ್ಯವೆಲ್ಲ ಸ್ವರ್ಗದಲಿಲ್ಲಚಲ್ವಿ ದ್ರೌಪತಿಗೆ ಹೇಳಿ ಬಂದೆ ನಮ್ಮಯ್ಯ 11
ಬಲ್ಲಿದ ಅತಳ ವಿತಳ ಸುತಳ ಮಹಾತಳ ತಳಾತಳ ರಸಾತಳದಲಿಲ್ಲಈ ಮುಯ್ಯಕ್ಕೆಲ್ಲಿ ಸರಿ ಹೇಳಿ ಬಂದೆನಮ್ಮಯ್ಯ12
ನಮ್ಮ ದೇವಿಯರು ತಂದ ರಮ್ಯದ ಮುಯ್ಯವು ಈ ಮಹಿಮೆಯೊಳಗಿಲ್ಲ ಬೊಮ್ಮ ಲೋಕದಲಿಲ್ಲಸುಮನ ಸಾರಿರುವೋ ಸ್ವರ್ಗಲೋಕದಲಿಲ್ಲ ಅಮ್ಮಿಳ್ಳ ಪಾತಾಳವೆಂದೆ ನಮ್ಮಯ್ಯ13
ರಮಿಯರಸನು ತಂದ ಜಮ್ಮನೇ ನಿಮ್ಮ ಭಾಗ್ಯವು ಬಹಳ ಅಮ್ಮ ದ್ರೌಪತಿ ಎಂದು ಜುಮ್ಮನೆ ಹೇಳಿ ಬಂದೆನಮ್ಮಯ್ಯ 14
****