..
ಮಾರ ಜಗದೇಕವೀರ ನಿನ್ನ ಕೊಮಾರ ನೀ ದುಃಖದೂರ ಸುಖಕರ ಎಲೆ ನಾರಾಯಣ ಜಗದ್ಧರ ಮುಕ್ತಿದಾ-ತಾರ ಎನಗೆ ನಿನ್ನ ತೋರ ಇನ್ನುಬಾರಾ ನಾನರಿಯೆ ಸಿರಿಧರ ಪ.
ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನುಹೀನಜನರೊಡನಾಡಿ ಕಡುನೊಂದೆನುಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದುದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು 1
ಕಂಡಕಂಡವರ ಬೇಡಿ ಬೇಸರಲಾರೆನೊ ತಂದೆಪುಂಡರೀಕಾಕ್ಷ ಪುರುಹೂತವಂದ್ಯಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನತೊಂಡರೊಳಗೆನ್ನನಿರಿಸಿ ದುರುಳರಸಂಗವ ಬಿಡಿಸು 2
ಶ್ರೀ ಹಯವದನರಾಯ ಆಶ್ರಿತಜನಸುಖೋಪಾಯಮೋಹಾಂಧಕಾರ ಮಾರ್ತಾಂಡ ಶೂರನೇಹದಿಂದೆನ್ನ ಕೈವಿಡಿದು ದುಷ್ಟರ ಬಡಿದುಕಾಹುಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು 3
***