..
kruti by ಮಹಾನಿಧಿವಿಠಲರು mahanidhi vittalaru
ಶಾಮಸುಂದರ ಪೊರೆಯೊ ರಘುರಾಮಾ
ಕಾಮಿತ ಫಲವಿತ್ತು ಪ
ಸೋಮಧಾಮ ಸುತ್ತಾಮ ಸುರಾರ್ಚಿತ
ಕರುಣದಿ ದಯವಿತ್ತು ಅ.ಪ.
ತಟಿತ್ಕೋಟಿ ನಿಭ ಹಾಟಕಾಂಬರನೆ
ಘಟಿತವಾದ ಈ ಜಟಿಲ ಶರಧಿಯೊಳು
ನಟ ನಡುವೆ ಸಿಲುಕಿ ಗುಟಕ ನೀರು ಕುಡಿದ ಈ
ಪುಟ [ಟ್ಟ] ಪುರುಷನ ಮೇಲೆ ದೃಷ್ಟಿ ಇಟ್ಟು ನೋಡಿದರೆ
ಪಟುಲವೇನೋ ವಟಪತ್ರಶಯನನೆ
ನಟವಳಿಯೊಳು ಈ ಭಕುತ ಕಟಕಿಯ ಮಾಡೆ 1
ಚಂಡ ವಿಕ್ರಮ ಕೋದಂಡ ದೀಕ್ಷಾ ಖಂಡ ಮಹಿಮಾರಾಮಾ
ಖಂಡ ಪರಶುಮಾರ್ತಾಂಡ ಸುರಾರ್ಚಿತ ಪಂಡಿತ ರಣಭೀಮಾ
ದುರಿತವೇಕೋ ಗಂಡ ಕಂಠೀರವನೆ ಡಿಂಗರಿಗಾತಿ ಪ್ರೇಮಾ
ಅಂಡಜವಾಹನ ಪಾಂಡವ ಮೂರುತಿ ಕುಂಡಲಗಿರಿಧಾಮಾ 2
ಘನಚರಿತ ಪ್ರಸನ್ನ ದಯಾಂಬುಧಿ ಇನ್ನಾದರೂ ಈ ಚಿಣ್ಣಗೆ
ಚೆನ್ನಾಗಿ ದೃಷ್ಟಿಯಿಟ್ಟು ಕೃಪೆಮಾಡು ಸನ್ನುತಿಸುವೆ ಮುನ್ನಾ
ಕಣ್ಣೆತ್ತಿ ನೋಡದೆ ಅನ್ನ ದೈªಂಗಳ ಬಿನ್ನವಿಸುವೆ ನಿನ್ನಾ
ಮನ್ಮಥಪಿತ ಭೋ ಮಹಾನಿಧಿವಿಠಲ ಅಹರಹದಿ ನಿನ್ನಾ ಚನ್ನಾ 3
***