Showing posts with label ಪ್ರಾಣದೇವನೆ ನಿನ್ನ ಧ್ಯಾನಿಸದೆ ಮನದಿ ಬಲು ಹೀನನಾದೆನೊ ಲೋಕದಿ kamalanabha vittala. Show all posts
Showing posts with label ಪ್ರಾಣದೇವನೆ ನಿನ್ನ ಧ್ಯಾನಿಸದೆ ಮನದಿ ಬಲು ಹೀನನಾದೆನೊ ಲೋಕದಿ kamalanabha vittala. Show all posts

Thursday, 5 August 2021

ಪ್ರಾಣದೇವನೆ ನಿನ್ನ ಧ್ಯಾನಿಸದೆ ಮನದಿ ಬಲು ಹೀನನಾದೆನೊ ಲೋಕದಿ ankita kamalanabha vittala

 ..

kruti by Nidaguruki Jeevubai


ಪ್ರಾಣದೇವನೆ ನಿನ್ನ ಧ್ಯಾನಿಸದೆ ಮನದಿ ಬಲು

ಹೀನನಾದೆನೊ ಲೋಕದಿ ಪ


ದಾನವಾರಿಯ ಪಾದ ಧ್ಯಾನಮಾಡುವ ಮುಖ್ಯ-

ಪ್ರಾಣನೀನೆಂದು ಮನಸಾರ ಪೂಜಿಸದೆ ಶ್ರೀ ಅ.ಪ


ಶರಧಿ ಬಂಧಿಸಿ ದಶಶಿರನಳಿದ ಪಾದ

ಸ್ಮರಣೆ ಮಾಡುತಲಿ ನಿತ್ಯ

ಧರಣಿಸುತೆಯಳ ತಂದು ಪರಮ ಸಂಭ್ರಮದಿಂದ

ಮೆರೆವದೇವನ ಸ್ಮರಿಸುತ

ನರರೂಪದಿಂದ ದಶರಥನ ಪುರದಲಿ ನಿಂತ

ಪರಮಾತ್ಮನಿಗೆ ನಮಿಸುತ

ಸುರರು ಸ್ತುತಿಸಲು ಪರಮಹರುಷದಿಂದಾಲಿಸುತ

ಹರಿಯ ಮೆಚ್ಚಿಪ ನಮ್ಮ ಗುರುಪವಮಾನ ಶ್ರೀ 1

ಅಂದು ಆ ಬಕನ ಭಯದಿಂದ ಸಜ್ಜನರೆಲ್ಲ

ಕುಂದಿರಲು ಭಯವ ಹರಿಸಿ

ಅಂಧಕನ ಸುತನ ಬಂಧಿಸುತ ರಣದೊಳಗೆ ಯದು-

ನಂದನಗೆ ಪ್ರೀತಿ ಪಡಿಸಿ

ಕೊಂದು ಬಿಸುಡಲು ಜರಾಸಂಧನನು ವಸುದೇವ

ಕಂದ ನೋಡುತಲಿ ಸುಖಿಸಿ

ಇಂದಿರಾರಮಣ ಮುಕುಂದನನು ಪೂಜಿಸುವ

ಸುಂದರ ಭೀಮ ನಿಸ್ಸೀಮನಹುದೆಂದು ಶ್ರೀ2

ಪತಿತ ಸಂಕರದಿಂದ ಮತವೆಲ್ಲ ಕೆಡಲು ಶ್ರೀ-

ಪತಿಯ ಧ್ಯಾನವು ಮಾಡುತ

ಯತಿ ಶಿರೋಮಣಿಯಾಗಿ ಶ್ರುತಿ ಸ್ಮøತಿಗಳಣಿ ಮಾಡಿ

ಹಿತವ ಜನರಿಗೆ ತೋರುತ

ಎಸೆವ ಘನಗಿರಿಯಲ್ಲಿ ಅಸದಳ ಹನುಮರೆಂ-

ದೆಸೆದು ಮಿಗೆ ಶೋಭಿಸುತಲಿ

ವಾರಿ ದಡದಲಿ ಕಮಲನಾಭ ವಿಠ್ಠಲನ ಸ್ಮರಿಸಿ

ಧೀರ ಹನುಮಂತನಪಾರ ಮಹಿಮನೆಂದು

ವನಗಿರಿಯ ಗುಹೆಗಳಲಿ ಹನುಮಂತನೆಂದೆನುತ

ಎಣಿಸಲಳವಲ್ಲವೋ ಘನಪರಾಕ್ರಮಿ ಮುಖ್ಯ 3

***