Showing posts with label ಪೊಂದಿ ಬದುಕಿರೊ ಗುರು ರಾಘವೇಂದ್ರರ shreerama vittala. Show all posts
Showing posts with label ಪೊಂದಿ ಬದುಕಿರೊ ಗುರು ರಾಘವೇಂದ್ರರ shreerama vittala. Show all posts

Monday, 6 September 2021

ಪೊಂದಿ ಬದುಕಿರೊ ಗುರು ರಾಘವೇಂದ್ರರ ankita shreerama vittala

 ankita ಶ್ರೀರಾಮವಿಠಲ

ರಾಗ: [ಯದುಕುಲಕಾಂಭೋಜಿ] ತಾಳ: [ತಿಶ್ರನಡೆ]


ಪೊಂದಿ ಬದುಕಿರೊ ಗುರು ರಾಘವೇಂದ್ರರ


ಸಂದೇಹವಿಲ್ಲದೆ ಸರ್ವರನ್ನು ಕರೆದು ಪೊರೆವರ ಅ.ಪ


ಇಷ್ಟಭಕ್ತರ ಅನಿಷ್ಟಕಳೆವರ ಸ-

ರ್ವೇಷ್ಟದಾಯಕ ಶ್ರೀರಾಮಚರಣ ತೋರ್ವರ 1

ಪೂರ್ಣಬೋಧರಮತಸುಶರಧಿಚಂದಿರ 

ಪ್ರಣತಭಕ್ತ ಕಾಮಧೇನು ರಾಘವೇಂದ್ರರ 2

ಬಂದ ಭಕ್ತರ ಕಾಮಿತಗಳ ಇಂಗಿತವ ತಾವ್ ತಿಳಿಯುತ

ಸುಂದರ ಶ್ರೀರಾಮವಿಠಲನ ಇಂಗಿತದಂತೀವರ 3

***