Showing posts with label ದಾರ ಮಗನಮ್ಮ ರಂಗಯ್ಯ ದಾರ ಮಗನಮ್ಮ purandara vittala. Show all posts
Showing posts with label ದಾರ ಮಗನಮ್ಮ ರಂಗಯ್ಯ ದಾರ ಮಗನಮ್ಮ purandara vittala. Show all posts

Friday, 6 December 2019

ದಾರ ಮಗನಮ್ಮ ರಂಗಯ್ಯ ದಾರ ಮಗನಮ್ಮ purandara vittala

ರಾಗ ಬೇಗಡ. ಛಾಪು ತಾಳ

ದಾರ ಮಗನಮ್ಮ, ರಂಗಯ್ಯ
ದಾರ ಮಗನಮ್ಮ
ದಾರಿಯ ನೋಡುತ್ತ
ದಾರು ಈತನ ದಾರು ತಿಳಿಯದು

ಅರವಿಂದಾನನೆ ಕೇಳ್
ಅರ ಮೊರೆಯಾದರೆ
ಅರಿಯದಂದದಿ ಬಂದು ಅ-
ಧರ ಮುದ್ದಾಡಿದ

ಕಾಂತೆ ಕೇಳ್ ಏ-
ಕಾಂತದಿ ಮಲಗಿದೇ
ಕಾಂತನಾಗಿ ಏ-
ಕಾಂತಕ್ಕೆ ಕರೆತಾರೆ

ನಾರಿ ಕೇಳೆ ಅಕ್ಕ
ಸಾರವನೆ ಹೊಕ್ಕು
ಸೇರಿದ ನಿನ್ನಯ
ಸೀರೆಯ ಸೆಳೆದೊಯ್ದ

ಸರಸಿಜಾಕ್ಷಿ ಕೇಳ್
ರಾತ್ರೆ ವೇಳ್ಯದಿ
ಸರಸರನೇ ಬಂದು
ಸರಸವಾಡಿ ಪೋದ

ಗಾಡಿಗಾರ ಪುರಂದರ ವಿಠಲ
ಗಾಢಾಲಿಂಗನ ಮಾಡಿ
ಓಡಿ ಪೋದನಮ್ಮ
***

pallavi

dAra maganamma rangayya

anupallavi

dAra maganamma dAriya kaTTuvanu dArigU ivana dAriyu tiLiyadu

caraNam 1

aravindAnane kELu aramoreyillade ariyadandadi bandu adhara muddikkida

caraNam 2

kAnte kELu EkAntadi malagiddE kAntadinda EkAntakke karedane

caraNam 3

nAri kELe akka sAravane hokku sErida ninnaya sIreya seLedoida

caraNam 4

sarasijAnane kELe rAtre vELyadi haruSadindali enna sarasakke eLedane

caraNam 5

gADigAra shrI purandara vITTala gADAlingana mADi Odi pOdanamma
***

pallavi

yAra maganamma rangayya

anupallavi

yAra maganamma dAriya kaTTuvanu yArigu ivana dAriyu tiLiyude

caraNam 1

kAnte kELu EkAntadi mlagidde kAntanente EkAntake karedane
aravindAnane kELu aremoreyillade arekaTTi enna adharamuddikkida

caraNam 2

sarasijAnane kELE sari rAtri vELeyali haruSadindali enna sarasakke eLedane
gADigAra shrI purandara viTTala gADAlingana mADi Odi pOdanamma
***

ರಾಗ ಜಂಜೂಟಿ ಛಾಪುತಾಳ

ಯಾರ ಮಗನಮ್ಮ ರಂಗಯ್ಯ ||ಪ||

ಯಾರ ಮಗನಮ್ಮ ದಾರಿಯ ಕಟ್ಟುವ
ಯಾರಿಗು ಇವನ ದಾರಿಯು ತಿಳಿಯುದೆ ||

ಕಾಂತೆ ಕೇಳು ಏಕಾಂತದಿ ಮಲಗಿದ್ದೆ
ಕಾಂತನೆಂತೆ ಏಕಾಂತಕೆ ಕರೆದನೆ ||

ಅರವಿಂದಾನನೆ ಕೇಳು ಅರೆಮೊರೆಯಿಲ್ಲದೆ
ಅರೆಕಟ್ಟಿ ಎನ್ನ ಅಧರಮುದ್ದಿಕ್ಕಿದ ||

ಸರಸಿಜಾನನೆ ಕೇಳೇ ಸರಿರಾತ್ರಿವೇಳೆಯಲಿ
ಹರುಷದಿಂದಲಿ ಎನ್ನ ಸರಸಕ್ಕೆ ಎಳೆದನೆ ||

ಗಾಡಿಗಾರ ಶ್ರೀಪುರಂದರವಿಠಲ
ಗಾಢಾಲಿಂಗನ ಮಾಡಿ ಓಡಿಪೋದನಮ್ಮ ||
***