Showing posts with label ಪಾಹಿಮಾಂ ಪರಮೇಶಪುರಹರ ಪಾಹಿ ಪನ್ನಗಭೂಷಣಾ govinda PAAHIMAAM PARAMESHAPURAHARA PAAHI PANNAGA BHUSHANA. Show all posts
Showing posts with label ಪಾಹಿಮಾಂ ಪರಮೇಶಪುರಹರ ಪಾಹಿ ಪನ್ನಗಭೂಷಣಾ govinda PAAHIMAAM PARAMESHAPURAHARA PAAHI PANNAGA BHUSHANA. Show all posts

Thursday, 11 November 2021

ಪಾಹಿಮಾಂ ಪರಮೇಶಪುರಹರ ಪಾಹಿ ಪನ್ನಗಭೂಷಣಾ ankita govinda PAAHIMAAM PARAMESHAPURAHARA PAAHI PANNAGA BHUSHANA

by ಗೋವಿಂದದಾಸ
ಪಾಹಿಮಾಂ ಪರಮೇಶಪುರಹರ ಪಾಹಿ ಪನ್ನಗಭೂಷಣಾ |
ಪಾಹಿಮಾಂ ಗಿರಿಜೇಶ ಸುರವರಪಾಹಿಕ್ಷನ್ನಘನಾಶನಾ 1

ಪಾಲಯಂಫಾಲಾಕ್ಷ ಸಜ್ಜನಪಾಲ ಶಂಭು ಮಹೇಶ್ವರಾ |
ಪಾಲಯಂ ಪಂಚಾಸ್ಯ ದುರ್ಜನಕಾಲ ಅಂಬಮನೋಹರಾ 2

ಮಾಯಮಂ ಬೆರಸೀರ್ಪುದೆನ್ನಯ ಕಾಯದೊಳ್ ಶಶಿಶೇಖರಾ |
ಪಾಯಮಂ ಇದಕರಿಯೆ ನಿನ್ನಯ ಸಹಾಯ ಕೊಡುವಿಷಕಂಧರಾ 3

ನಂದಿಯನೇರುತ್ತ ಭುವನಾನಂದದಲಿ ಸಂಚರಿಪನೇ |
ಬಂಧಮಂ ಬಿಡಿಸೆಂಬೆ ಶಿವ ಗೋವಿಂದದಾಸನಪೊರೆವೆನೆ ||ಪಾಹಿಮಾಂ| |4
***