ಶ್ರೀ ಮಾನಸಚಿಂತಯ ಮೌನೀದಂ
ರಾಮಾನುಜಯತಿ ಕರುಣಾಸಾದಂ ಪ
ದ್ರುತ ಕಷಾಯ ವಸನ ತ್ರಿದಂಡಂ
ಶ್ರೀಪತಿಮತ ಸಂಸ್ಥಾಪನ ಶಾಂಡಂ ಅಪ
ಉಪವೀತಾ ಶಿಖಾ ವಿರಾಜಮಾನಂ
ಉಲ್ಲಸಿತ ಊಧ್ರ್ವಪುಂಡ್ರ ವಿತಾನಂ
ಅಧಿಗತ ಯಾಮುನಿ ಸಂಪ್ರದಾಯಂ
ಅಮಿತದುರಿತಹರ ನಿಜನಾಮಧೇಯಂ1
ಗೋಷ್ಠೀಪೂರ್ಣ ಗುರುದಯಾಪಾತ್ರಂ
ಗುರುತರ ಕÀಳಾಧುನಿ ನಿಜಗೋತ್ರಂ
ಮಾನುಷವೇಷೋಪಗತಾನಂತಂ
ಮುನಿಯಾದವ ಪದಯುಗ ನಿಹಿತಾಸ್ವಾಂತಂ2
ವಿದಿತಾ ಶ್ರೀಭಾಷ್ಯಾದಿ ವಿರಚನಂ
ವೇದಸದೃಶ ಮಹಿಮೋಜ್ವಲ ರಚನಂ
ದ್ವಯಮಂತ್ರ ವಿರತರಣೀತ ಧುರೀಣಂ
ವಾಗ್ವಶಗತ ವೇದ ಶಾಸ್ತ್ರ ಪುರಾಣಂ 3
ಪರವಾದಿ ಮಹಾಗಜಂ ಮುಗ್ರರಾಜಂ
ಸರಸಹೃದಯ ಬುಧಜನ ಸಂರಾಜಂ
ಶ್ರೀಕೋಸಲ ಪುರವರ ಭಕ್ತವತಂಸಂ
ಕುಟಿಲಮತ ಮಹಾಂಧತಮಸಹಂಸಂ 4
****