Showing posts with label ಮುರಲೀಯನೂದುವ ಮುರಹರನ್ಯಾರೇ ಪೇಳಮ್ಮಯ್ಯಾ tandevaradagopala vittala. Show all posts
Showing posts with label ಮುರಲೀಯನೂದುವ ಮುರಹರನ್ಯಾರೇ ಪೇಳಮ್ಮಯ್ಯಾ tandevaradagopala vittala. Show all posts

Thursday, 5 August 2021

ಮುರಲೀಯನೂದುವ ಮುರಹರನ್ಯಾರೇ ಪೇಳಮ್ಮಯ್ಯಾ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ಮುರಲೀಯನೂದುವ ಮುರಹರನ್ಯಾರೇ ಪೇಳಮ್ಮಯ್ಯಾ ಪ

ಮಾರನ ಕುಶಲವ ಮೋದದಿ ಬೀರುತ ಮನಮೋಹಗೊಳಿಪ ಮಾರನಯ್ಯ ಕಾಣೆ ಅ.ಪ.


ಸುಂದರೀ ಸಖಿ ಸುಕುಮಾರಿ ಇಂದೀನ ವೈಭವ ಭಾರಿನಂದಾವೃಜನದೊಳಗಿಹ ನಾರೀ ವೃಂದಗಳೆಲ್ಲಾ ಪರಿಪರಿ ಸೇರಿ ನಂದನ ಸುತನಾ ಕಂದನ ಬಾಧೆಯ ತಾಳದೆ ತನ್ನೊಳು ಪೊಗಳುವ ಘನಶೌರಿ1

ಮದನಾ ಜನಕನು ಮೌನದಿ ನಿಂತಾಮಾನಿನಿಯರು ಮಾಡುವ ಚಿಂತಾ ಮನವಾತುರಗೊಳಿಪುದು ಶ್ರೀಕಾಂತಾ ಮಾವನರಿಪು ಸುಧೆನುಣಿಸು ಬಾ ಪ್ರಾಣಕಾಂತಾಮಾನರಹಿತಳಾಗಿ ಗಾನ ಮಾಡುವೆ ಘನ ಪ್ರಾಣಮಳಹೋ ಶ್ರೀಕೃಷ್ಣನೆಂದು 2

ಅಂಗದೊಸನವ ತೂರುತ ಮಂದಾಮಾರುತ ಪಡಿಸುವ ಮುಕುಂದಾ ಭಂಗಬಡಲಾರೆವು ಶ್ರೀಗೋವಿಂದಾ ಮದಮುರಿ ಮದಕುಲ ನಂದಾ ತುಂಗಮಹಿಮ ತಾ ಬಂದು ಪೊರೆದ ತಂದೆವರದಗೋಪಾಲವಿಠಲನ ಸಖ 3

***