Showing posts with label ಮಂಡೆ ಬಾಗಿ ಕರವ ಮುಗಿವೆ ಕಾಯೊ ಹರಿಹರಿ pranesha vittala MANDE BAAGI KARAVA MUGIVE KAAYO HARI HARI. Show all posts
Showing posts with label ಮಂಡೆ ಬಾಗಿ ಕರವ ಮುಗಿವೆ ಕಾಯೊ ಹರಿಹರಿ pranesha vittala MANDE BAAGI KARAVA MUGIVE KAAYO HARI HARI. Show all posts

Friday, 10 December 2021

ಮಂಡೆ ಬಾಗಿ ಕರವ ಮುಗಿವೆ ಕಾಯೊ ಹರಿಹರಿ ankita pranesha vittala MANDE BAAGI KARAVA MUGIVE KAAYO HARI HARI



by ಪ್ರಾಣೇಶದಾಸರು
ಮಂಡೆಬಾಗಿಕರವಮುಗಿವೆ ಕಾಯೊ ಹರಿಹರಿ |
ಪುಂಡರೀಕನಯನ ಮರೆಯಬೇಡವೊ ಹರಿಹರಿ ಪ

ಕರಿವರದನೆ ಸರ್ವಾಂತರ್ಯಾಮಿ ಹರಿಹರಿ |
ಕರುಣಾಸಾಂದ್ರ ತರುಣಿ ಮಾನಕಾಯ್ದ ಹರಿಹರಿ ||
ಶರಧಿಸುತೆಯ ರಮಣ ದೀನಬಂಧು ಹರಿಹರಿ |
ಅರಿಯೆ ನಿನ್ನನುಳಿದು ಕಾಯ್ವರನ್ನು ಹರಿಹರಿ 1

ಮೀನನಾಗಿ ವೇದಗಳನು ತಂದೆಹರಿಹರಿ|
ಆ ನಗವನು ಪೊತ್ತು ಅಮೃತವೆರೆದೆಹರಿಹರಿ||
ನೀನೇ ವರಾಹನಾಗಿಯವನಿಯ ತಂದೆಹರಿಹರಿ|
ದಾನವನುದರವ ಬಗೆದು ಅಂದುಹರಿಹರಿ 2

ಚಿಕ್ಕ ರೂಪದಿಂದ ಬಲಿಯ ತುಳಿದೆಹರಿಹರಿ|
ಸೊಕ್ಕಿದರಸುಗಳನು ಸವರಿಬಿಟ್ಟೆಹರಿಹರಿ||
ರಕ್ಕಸರನು ಕೊಂದು ಸತಿಯ ತಂದೆಹರಿಹರಿ|
ಅಕ್ಕರದಲಿ ಪಾರಿಜಾತ ತಂದೆಹರಿಹರಿ3

ಅಂಬರವನು ತೊರೆದೆ ಬೌದ್ಧನಾಗಿ ಹರಿಹರಿ |
ಕುಂಭಿಣಿಯೊಳು ಕುದುರೆಯೇರಿ ಮೆರೆದೆಹರಿಹರಿ||
ಶಂಬರಾಂ ಜನಕ ಧರ್ಮತನಯಹರಿಹರಿ|
ಅಂಬುಜಾಸನಾದಿ ದಿವಿಜವಂದ್ಯಹರಿಹರಿ4

ಶೌರಿರಘುಜ ಮುನಿಜ ಪ್ರಾಣೇಶ ವಿಠಲಹರಿಹರಿ|
ಸಾರಿದ ಶರಣರಿಗೆ ಕಲ್ಪತರುವೆಹರಿಹರಿ||
ಘೋರದುರಿತವನಕೆ ಧನಂಜಯನೆ ಹರಿಹರಿ |
ಭಾರನಿನ್ನದೆವೆ ಹೇಳಲ್ಯಾಕೆಹರಿಹರಿ 5
***
ಮಂಡೆಬಾಗಿ ಕರವ ಮುಗಿವೆ ಕಾಯೊ ಹರಿಹರಿ
ಪುಂಡರೀಕನಯನ ಮರೆಯಬೇಡವೊ ಹರಿಹರಿ ll ಪ ll

ಕರಿವರದನೆ ಸರ್ವಾಂತರ್ಯಾಮಿ ಹರಿಹರಿ l
ಕರುಣಾಸಾಂದ್ರ ತರುಣಿ ಮಾನಕಾಯ್ದ ಹರಿಹರಿ l
ಶರಧಿಸುತೆಯರಮಣ ದೀನಬಂಧು ಹರಿಹರಿ l
ಅರಿಯೆ ನಿನ್ನನುಳಿದು ಕಾಯ್ವರನ್ನು ಹರಿಹರಿ ll 1 ll

ಮೀನನಾಗಿ ವೇದಗಳನು ತಂದೆ ಹರಿಹರಿ l
ಆ ನಗವನು ಪೊತ್ತು ಅಮೃತವೆರೆದೆ ಹರಿಹರಿ l
ನೀನೇ ವರಾಹನಾಗಿಯವನಿಯ ತಂದೆ ಹರಿಹರಿ l
ದಾನವನುದರವ ಬಗೆದು ಅಂದು ಹರಿಹರಿ ll 2 ll

ಚಿಕ್ಕ ರೂಪದಿಂದ ಬಲಿಯ ತುಳಿದೆ ಹರಿಹರಿ l
ಸೊಕ್ಕಿದರಸುಗಳನು ಸವರಿಬಿಸುಟೆ ಹರಿಹರಿ l
ರಕ್ಕಸರನು ಕೊಂದು ಸತಿಯ ತಂದೆ ಹರಿಹರಿ l
ಅಕ್ಕರದಲಿ ಪಾರಿಜಾತ ತಂದೆ ಹರಿಹರಿ ll 3 ll

ಅಂಬರವನು ತೊರೆದೆ ಬೌದ್ಧನಾಗಿ ಹರಿಹರಿ l
ಕುಂಭಿಣಿಯೊಳು ಕುದುರೆಯೇರಿ ಮೆರೆದೆ ಹರಿಹರಿ l
ಶಂಬರಾರಿಜನಕ ಧರ್ಮತನಯ ಹರಿಹರಿ l
ಅಂಬುಜಾಸನಾದಿ ದಿವಿಜವಂದ್ಯ ಹರಿಹರಿ ll 4 ll

ಶೌರಿ ರಘುಜ ಮುನಿಜ ಪ್ರಾಣೇಶವಿಟ್ಠಲ ಹರಿಹರಿ l
ಸಾರಿದ ಶರಣರಿಗೆ ಕಲ್ಪತರುವೆ ಹರಿಹರಿ l
ಘೋರ ದುರಿತವನಕೆ ಧನಂಜಯನೆ ಹರಿಹರಿ l
ಭಾರ ನಿನ್ನದೇವೆ ಹೇಳಲ್ಯಾಕೆ ಹರಿಹರಿ ll 5 ll
***