Showing posts with label ಗುರುವಿನ ಮರೆಯಾದಿರಮ್ಮ tande muddumohana vittala. Show all posts
Showing posts with label ಗುರುವಿನ ಮರೆಯಾದಿರಮ್ಮ tande muddumohana vittala. Show all posts

Friday, 27 December 2019

ಗುರುವಿನ ಮರೆಯಾದಿರಮ್ಮ ankita tande muddumohana vittala

by ತಂದೆ ಮುದ್ದುಮೋಹನ ವಿಠಲರು
ಗುರುವಿನ ಮರೆಯಾದಿರಮ್ಮ ಪ

ಅಂಕಿತವನೆ ಇತ್ತಸಿರಿ ಗುರುವಿನ ನೀನುಮನದೊಳು ನೆನೆಯಬÉೀಕಮ್ಮ ತಂಗಿ ಅ.ಪ

ಗುರುವಿನ ಮರೆತರೆ ನಿನಗೆ ಥರಥರ ನರಕಥರಥರನರಕವ ಅನುಭವಿಸಬೇಕಮ್ಮ ತಂಗೀ 1

ಜ್ಞಾನಾನಂದಾತ್ಮಕನಾದ ಶ್ರೀಹರಿಯನ್ನುಗುರುವಿನದ್ವಾರಾ ನೀ ತಿಳಿ ಮಂಗಳಾಂಗಿ 2

ಗುರುವೆ ತಂದೆಯು ಬಂಧು ಬಳಗಾವೆಂದು ಅಕ್ಕರೆಯಿಂದ ನೀ ನೆನೆಯಬೇಕಮ್ಮಾ 3

ಗುರುವಿನ ಸೇವೆಯ ಮಾಡುತ್ತ ಗುರುಗಳಕೃಪೆಗೆ ಪಾತ್ರರಾಗಿ ಬಾಳಬೇಕಮ್ಮಾ 4

ಮಂಗಳ ಮಹಿಮ ಶ್ರೀ ತಂದೆಮುದ್ದುಮೋಹನ್ನವಿಠಲ ದಾಸರೆನಿನಗೆ ಸದ್ಗುರು ಎಂದು ತಿಳಿಯಮ್ಮ ತಂಗಿಈ ಮಾತು ಪುಸಿಯಲ್ಲ ಮರೆಯಬೇಡಮ್ಮ ತಂಗೀ 5
*******