..
ಪರಮಪಾವನ್ನನಾಮ ಭಳಿರೆ ಸಂಗರ ಭೀಮ
ಸರಸಗುಣಾಭಿರಾಮ ತರಣಿವಂಶ ಲಲಾಮ
ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ.
ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ
ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ
ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ
ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು
ದಕ್ಕಲೆನುತ ಪೋಗಿ ದಂಡಕಾರಣ್ಯವ
ಪೊಕ್ಕು ದೂಷಣ ಮುಖ್ಯ ಭೂರಿ ದಾನವಹಿಂಡ
ಚಕ್ಕಂದದಲಿ ಕೊಂದ ಜಾಣ ನೀನಹುದೊ 1
ಭುವನೇಶ ಶಬರಿಯ ಪೂಜೆಯ ಕೈಕೊಂಡು
ಪವನಾತ್ಮಜನ ಕಂಡು ಬರಹೇಳಿ
ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ
ಹವಣರಿಯದಸುವ ಕೊಂದು
ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ-
ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ
ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ 2
ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ
ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ-
ಗಾರವಾದ ಸಾಕೇತಪುರಕೆ ಭರದಿ ಬಂದು
ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ
ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ
ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ
ಧರೆ ಆಳಿದ ಪರಿಣಾಮದಿ ಹಯವದನ ರಾಮ3
***