Showing posts with label ಸತ್ಯಧ್ಯಾನರ ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ karpara narahari satyadhyana teertha stutih. Show all posts
Showing posts with label ಸತ್ಯಧ್ಯಾನರ ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ karpara narahari satyadhyana teertha stutih. Show all posts

Monday, 2 August 2021

ಸತ್ಯಧ್ಯಾನರ ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ ankita karpara narahari satyadhyana teertha stutih

ಸತ್ಯಧ್ಯಾನರ ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ ಪ


ಮತ್ರ್ಯನೆ ಶ್ರೀ ಗುರು ಸತ್ಯe್ಞÁನ ಸುತೀರ್ಥರ ಕರ ಕಂ-

ಜೋತ್ಥರಾದ ಗುರು ಅ.ಪ


ಸುತ್ತಲು ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳಲಿ ಚರಿಸಿ

ಮತ್ತ ಮಾಯಿ ಜನ ಹಸ್ತಿ ಗಣಕೆ ಪಂಚ ವಕ್ತ್ರರೆಂದು ಕರಿಸಿ

ಛಾತ್ರ ವರ್ಗ ಸಂಯುಕ್ತರಾಗಿ ಸುಖತೀರ್ಥರ ಸುಮತಕೆ

ಸಂಸ್ಥಾಪಕ ಗುರು 1


ಏನು ಕರುಣವೊ e್ಞÁನಿಗಳನು ಧನದಾನದಿ ದಣಿಸುತಲಿ

ಕ್ಷೋಣಿ ವಿಬುಧರಿಗೆ ನ್ಯಾಯ ಸುಧಾರಸ ಪಾನ ಮಾಡಿಸುತಲಿ

ದೀನ ಜನಕೆ ಸುರಧೇನು ಎನಿಸಿದ ಮಹಾನುಭಾವರೆಂದು

ಸಾನುರಾಗದಲಿ 2


ಹೇಮ ವಜ್ರಮಯ ಮಂಟಪದಲಿ

ಶ್ರೀರಾಮನ ಪದಪದುಮ

ನೇಮದಿ ಪೂಜಿಸುವಾ ಮಹ ವೈಭವ

ನೋಳ್ಪಜನರ ಜನುಮ

ಈ ಮಹಿಯೊಳು ಸಾರ್ಥಕವೆನಿಸಿತು ಬಹು

ಧೀಮಜ್ಜನರಿಗೆ ಕಾಮಿತ ಗರಿಯುವ3


ಹರಿಪದ ಪೊಂದಲು ಮರುತ ಶಾಸ್ತ್ರವೆಂಬೊ

ತರಣಿಯೋಳ್ಪಗಲಿರುಳು

ಹರುಷದಿ ಕುಳಿತಿಹ ಧರೆಸುರರನು

ಭವಶರಧಿಯ ದಾಟಿಸಲು

ಕರದೊಳು ದಂಡÀವ ಧರಿಸಿ ನಿಂದಿರುವರರುಣ

ವಸನದಲಿ ಪರಿಶೋಭಿತ ತನು 4


ಶರಣು ಜನರ ಬಹು ದುರಿತ ತಮಕೆ ದಿನಕರ ಸಮರೆನಿಸುತಲಿ

ಸಿರಿ ಕಾರ್ಪರ ನರಹರಿಯ ಚರಣಯುಗ್ಮ ಸ್ಮರಿಸುತ ಹರುಷದಲಿ

ಧರೆಯೊಳು ಪಂಢರ ಪುರ ಸುಕ್ಷೇತ್ರದಿವರತನುವಿರಿಸಿದ

ಪರಮ ಮಹಿಮ ಗುರು 5

***


ಸತ್ಯಧ್ಯಾನರ ನಿತ್ಯ ಸ್ಮರಿಸಿ

ಕೃತಕೃತ್ಯನು ನೀನಾಗೋ | ಪ |


ಮರ್ತ್ಯನೆ ಶ್ರೀಗುರು ಸತ್ಯಜ್ಞಾನ |

ಸುತೀರ್ಥರಕರಕಂಜೋತ್ಥರಾದ ಗುರು | ಅ.ಪ |


ಸುತ್ತಲ್ ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳ ಚರಿಸಿ

ಮತ್ತಮಾಜಿಯಜ ಹಸ್ತಿಗಣಕೆ ಪಂಚವಕ್ತ್ರರೆಂದು ಕರೆಸಿ

ಛಾತ್ರವರ್ಗ ಸಂಯುಕ್ತರಾಗಿ ಸುಖ

ತೀರ್ಥರ ಸುಮತಕೆ ಸಂಸ್ಥಾಪಕ ಗುರು | ೧ |


ಏನು ಕರುಣವೋ ಜ್ಞನಿಗಳನು ಧನದಾನದಿ ದಣಿಸುತಲಿ

ಕ್ಷೋಣಿವಿಬುಧರಿಗೆ ನ್ಯಾಯ ಸುಧಾರಸಪಾನ ಮಾಡಿಸುತಲಿ

ದೀನ ಜನಗೆ ಸುರಧೇನು ಎನಿಸಿದ ಮ-

ಹಾನುಭಾವರೆಂದು ಸಾನುರಾಗದಲಿ | ೨ |


ಹೇಮವಜ್ರಮಯ ಮಂಟಪದಲಿ ಶ್ರೀರಾಮನ ಪದಪದುಮ

ನೇಮದಿ ಪೂಜಿಸುವಾ ಮಹವೈಭವ ನೋಳ್ಪಜನರ ಜನುಮ

ಈ ಮಹಿಯೊಳು ಸಾರ್ಥಕವೆನಿಸಿತು ಬಹು

ಧೀಮಜ್ಜನರಿಗೆ ಕಾಮಿತ ಗರೆಯುವ | ೩ |


ಹರಿಪದಪೊಂದಲು ಮರುತಶಾಸ್ತ್ರವೆಂಬೋ ತರಣಿಯೋಳ್ಪಗಲಿರಳು

ಹರುಷದಿ ಕುಳಿತಿಹ ಧರೆಸುರರನು ಭವಶರಧಿ ದಾಟಿಸಲು

ಕರದೊಳು ದಂಡವ ಧರಿಸಿ ನಿಂದಿರುವರ

ರುಣವಸನದಲಿ ಪರಿಶೋಭಿತತನು | ೪ |


ಶರಣ ಜನರ ಬಹುದುರಿತ ತಮಕೆ ದಿನಕರ

ಸಮರೆನಿಸುತಲಿ ಸಿರಿ ಕಾರ್ಪರ ನರಹರಿಯ ಚರಣಯುಗ್ಮ

ಸ್ಮರಿಸುತ ಹರುಷದಲಿ ಧರೆಯೊಳು ಪಂಡರಪುರ ಸುಕ್ಷೇತ್ರದಿ

ವರತನುವಿರಿಸಿದ ಪರಮ ಮಹಿಮ ಗುರು | ೫ |

****