Showing posts with label ಸಿರಿದೇವಿ ಹರಿಯ ದಯವು ಆವಾವ ಪರಿಯೆ ಆ ಪರಿ ಪಾಲಿಸೆ vasudeva vittala. Show all posts
Showing posts with label ಸಿರಿದೇವಿ ಹರಿಯ ದಯವು ಆವಾವ ಪರಿಯೆ ಆ ಪರಿ ಪಾಲಿಸೆ vasudeva vittala. Show all posts

Wednesday, 1 September 2021

ಸಿರಿದೇವಿ ಹರಿಯ ದಯವು ಆವಾವ ಪರಿಯೆ ಆ ಪರಿ ಪಾಲಿಸೆ ankita vasudeva vittala

 ..


kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಸಿರಿದೇವಿ ಹರಿಯ ದಯವು | ಆವಾವ

ಪರಿಯೆ ಆ ಪರಿ ಪಾಲಿಸೆ ಪ


ಆಲದೆಲೆಯಲಿ ಅಂದು | ನಿನ್ನಯ

ಮ್ಯಾಲೆ ಮಲಗಿಪ್ಪ ಹರಿಯ

ತೋಳು ಬಿಗಿದಾಲಂಗಿಸಿ | ಸೃಷ್ಟಿಯ

ಲೀಲೆಯನು ಮಾಡಿಸಿದ ತಾಯೆ 1


ವಕ್ಷವಾಲಯವ ಮಾಡಿದೆ | ಆವಾಗ

ದಕ್ಷಣಾದೇವ್ಯೆನಿಸಿದೆ

ಲಕ್ಷ್ಯವಿಲ್ಲದೆ ಭಾಗ್ಯವ | ಭಕ್ತರಿಗೆ

ವೀಕ್ಷೆಯಿಂದಲ್ಲಿ ಈವೆ 2


ದೇವತಾಜನ ಸ್ತುತಿಸೆ | ನೀ ಎನ್ನ

ಭಾವ ಹರಿಯಲಿ ನಿಲ್ಲಿಸೆ

ಕಾವ ಭಾರವು ನಿನ್ನದೆ | ಶ್ರೀ ವಾಸು

ದೇವವಿಠಲನ್ನ ರಾಣಿ 3

***