ಸೀತೆ ವಸುಮತಿ ಸಂಜಾತೆ ರಮಣೀಯ ಗುಣ
ಜಾತೆ ರಕ್ಷಿತ ಸರ್ವಭೂತೆ ಪರಿಪಾಹಿಮಾಂ ಪ
ಧನ್ಯೆ ವೈದೇಹಿರಾಜಕನ್ಯೆ ಪರಿವೃತ ಭಕ್ತದೈನ್ಯೆ ತ್ವ
ದನ್ಮಧ್ಯೆ ಮಾನ್ಯೆ ಪರಿಪಾಹಿಮಾಂ 1
ಧೀರೆ ಸಂವರಾನಿ ಹೃದಯಧಾರೆ ಕರಧೃತ ಕಲ್ಹಾರೆ
ಘನೋಪಮಿತ ಕುಚಭಾರೆ ಪರಿಪಾಹಿಮಾಂ 2
ಶಾಂತೆ ಕಾರುಣ್ಯ ಮನಸಿ ಸಾಮು
ನ್ಮಾತೆ ಶ್ರೀನಿಧಾನಲೋಚನಾಂತೆ
ಕೋಸಲ ರಮಣನ ಕಾಂತೆ ಪರಿಪಾಹಿಮಾಂ3
ಶ್ಯಾಮೆ ಲಾವಣ್ಯವಿಭವಸೀಮೆ ವದನನಿರ್ಜಿತಸೋಮೆ
ಸದಾನುಗತೆ ರಘುರಾಮ ಪರಿಪಾಹಿಮಾಂ 4
ಶರದೆ ಲವಿತೆ ದಿವ್ಯಾಭರಣ ಸಮುಜ್ವರಿತೆ
ಕೋಸಲನಗರಿವಂತೆ ಸುರವನಿತಾಜನ ಸಂಯ್ಯುತೆ 5
****