Showing posts with label ನಮೋ ನಮೋ ನಂದಕುಮಾರ ನಿನಗೆದುರ್ಯಾರೊ ಯದುಕುಲ ವೀರ bheemesha krishna. Show all posts
Showing posts with label ನಮೋ ನಮೋ ನಂದಕುಮಾರ ನಿನಗೆದುರ್ಯಾರೊ ಯದುಕುಲ ವೀರ bheemesha krishna. Show all posts

Wednesday 1 September 2021

ನಮೋ ನಮೋ ನಂದಕುಮಾರ ನಿನಗೆದುರ್ಯಾರೊ ಯದುಕುಲ ವೀರ ankita bheemesha krishna

..

ನಮೋ ನಮೋ ನಂದಕುಮಾರ ನಿನ-

ಗೆದುರ್ಯಾರೊ ಯದುಕುಲ ವೀರ ಭಜಿ-

ಸುವ ಭಕ್ತ ಜನರುದ್ಧಾರ ಮಾಡೊ

ಪರಮ ದಯಾಳು ನೀ ಸರ್ವ ಸ್ವತಂತ್ರ

ನಿನ್ನ ಧ್ವಜ ವಜ್ರಾಂಕುಶ ರೇಖಾ

ಪದುಮ ಪಾದಗಳಿಗೆ ನಮೋ ನಮೋ

ವೆಂಕಟಾದ್ರೀಶ ನಮೋ ನಮೋ ಪ


ಶ್ರೀಶ ಜಗದ್ಭರಿತ ನೀನು ಒಂದು-

ಕಾಸಿಗ್ವಿಷಯಗಳಲ್ಲ ನಾನು ನಿನ್ನ

ದ(ರ್ಶ)ನ ಹಾರೈಸುವೆನು ಪರಮ

ನುಗ್ರ(ಹ)ದಿ ಪಾಲಿಸೋ ನೀನು ಹರೇ

ದೋಷರಹಿತ ಎನ್ನ ದೋಷನಾಶನ ಮಾಡಿ

ಶೇಷಶಯನ ಶ್ರೀನಿವಾಸ ನೀ ದಯಮಾಡೊ1


ಬಾಯಿ ಬೀಗವನ್ಹಾಕಿ ಚರಿಯೆ ಗಂ-

ಡಾರತಿ(?) ಶಿರದ ಮೇಲ್ಹೊರೆಯೆ ನಿನ್ನ

ನಾಮವ ಕೊಂಡಾಡಲರಿಯೆ ಪಾದ-

ಚಾರ್ಯಾಗಿ ಬರುವುದೀಪರಿಯೆ ತಿಳಿದು

ಮಾನ್ಯದೊಕ್ಕಲು ಎಂದು ಬಹುಮಾನದಿಂದಿಟ್ಟು

ಮರೆಯದೆ ಸಲಹೆನ್ನ ಮಾಧವ ಕರುಣದಿ 2


ಬಾಡಿಗಿದ್ದರಾಯನ್ಹಿಡಿಯ (?) ನಿನ್ನ

ಅನುಮತಿಲ್ಲದೆ ದಾರಿ ನಡೆಯ

ಬ್ಯಾಡ ಬಿಡು ಲೋಭಿತನವ ಎ-

ನ್ನೊಡೆಯ ಬಿಡದೆ ಕಾಡುತ ಕಾಸು

ಕವಡೆ ಕಡ್ಡಿ ಕಣಜಕ್ಕೆ ಈ ಪರಿ

ಗಳಿಕೆ ದೇಶದ ಮೇಲೆ ಕಾಣೆನು 3


ಮುಡಿಪು ಬೇಡುವುದ್ಹೇಳೊ ಎಷ್ಟು ನಿನ್ನ

ಬಡಿತ ತಡೆಯಲಾರೆ ಪೆಟ್ಟು ಮಡಿ

ಮೈಲಿಗೆಂದರೆ ಅತಿಸಿಟ್ಟು ನಾ

ಬಿಚ್ಚಾಡುವೆನೊ ಬೀಡ ಬಿಟ್ಟು ಪ ್ರ-

ಸಾದ ತೀರ್ಥ ಬೇಕಾದರೆ ಕ್ರಯಕಟ್ಟಿ ಗಂ-

ಟ್ಯಾರಿಗೆ ಮಾಡುವಿ ಹೇಳೆನಗೊಂದಿಷ್ಟು 4


ಸತಿಗೆ ಮಾಡುವೆ ಲಕ್ಷ್ಮೀಪತಿಯೆ ನಿನ

ಸುತ ಸತ್ಯಲೋಕದಧಿಪತಿಯೆ ಅತಿ

ಹಿತ ಭಕ್ತರಿಗೆ ಭಿಕ್ಷೆಗತಿಯೇ ನೀಡಲು

ಧನವೊಲ್ಲದೆ ಬೇಡುವರೊ ಸದ್ಗತಿಯ ನಿನ-

ಗತಿಯಾಸೆ ಘನತ್ಯಲ್ಲ ಗತಿಪ್ರದಾಯಕ ಕೇಳೊ

ಪೃಥುವೀಶ ನಿನ್ನದಲ್ಲವೆ ಸಕಲೈಶ್ವರ್ಯ 5


ಕನಕಗಿರಿದೊರೆಯೆಂಬೊದೆಲ್ಲೊ ಬಂದ

ಜನಕೆ ಅನ್ನವ ನೀಡಲೊಲ್ಲ್ಯೊ ಜಗ-

ಜನಕ ನಿನ್ನನು ಕಾಣಲಿಲ್ಲೋ ನಾನಿ-

ರ್ಧನಿಕನೆಂಬುವುದು ನೀ ಬಲ್ಲ್ಯೊ ಎನ-

ಗನುಕೂಲ ಧೈರ್ಯವ ಕೊಟ್ಟು ನಿನ್ನ ದರುಶನ

ಸನಕಾದಿಗಳೊಡೆಯ ನಿನ್ನ ಮನಕೆ ಬಂದರೆ ನೀಡೊ6


ಶಂಕರ ಸುರರಿಂದ್ವಂದಿತನೊ ನಾ

ಕಿಂಕರ ನರರಿಂದ ನಿಂದಿತನೊ ನೀ

ಮಂಕುಜನರ ಪಾಪ ಪರಿಹಾರಕನೊ ಹರೇ

ಶಂಖ ಚಕ್ರಾಂಕಿತ ಭೀಮೇಶಕೃಷ್ಣನ ನಾಮ

ಶಂಕೆಯಿಲ್ಲದೆ ಕೊಟ್ಟು

ವೆಂಕಟ ದಯಮಾಡೊ 7

***