Showing posts with label ಕುಂದಣದ ಹಸೆಗೆ ಛಂದದಿಂದ ಬಾರೆ ಸಿಂಶುಕುಮಾರೆ shyamasundara KUNDANADA HASEGE CHANDADINDA BAARE SIMSHUKUMARE. Show all posts
Showing posts with label ಕುಂದಣದ ಹಸೆಗೆ ಛಂದದಿಂದ ಬಾರೆ ಸಿಂಶುಕುಮಾರೆ shyamasundara KUNDANADA HASEGE CHANDADINDA BAARE SIMSHUKUMARE. Show all posts

Wednesday, 1 December 2021

ಕುಂದಣದ ಹಸೆಗೆ ಛಂದದಿಂದ ಬಾರೆ ಸಿಂಶುಕುಮಾರೆ ankita shyamasundara KUNDANADA HASEGE CHANDADINDA BAARE SIMSHUKUMARE

ಕುಂದಣದ ಹಸೆಗೆ ಛಂದದಿಂದ ಬಾರೆ |

ಸಿಂಶುಕುಮಾರೆ ಬಾ ಸಿಂಧು ಕುಮಾರೆ |

ಶೃಂಗಾರಮಯವಾದ ಕಂಗೊಳಿಸುವ ಬಹು

ರಂಗಮಂಟಪದಲ್ಲಿ ತಿಂಗಳ ಸಹೋದರಿ 1

ಸಿಂಧುರಮಂದಗಮನೆ ಕುಂದಕುಟ್ಮಲರದನೆ

ಇಂದು ಧರೆಯಲಿ ಸುರವೃಂದವಂದಿತ ಜನನಿ 2

ಕಾಮನ ಜನನಿ ಕಾಮಿತದಾಯಿನಿ

ಗೋಮಿನಿರುಕ್ಮಿಣಿ ಶಾಮಸುಂದರನ ರಾಣಿ 3

***