Showing posts with label ಇಂದು ಇಂದುಧರನ ಪಾದದ್ವಂದ್ವಗಳನು ದಿನವು vijaya vittala. Show all posts
Showing posts with label ಇಂದು ಇಂದುಧರನ ಪಾದದ್ವಂದ್ವಗಳನು ದಿನವು vijaya vittala. Show all posts

Wednesday, 16 October 2019

ಇಂದು ಇಂದುಧರನ ಪಾದದ್ವಂದ್ವಗಳನು ದಿನವು ankita vijaya vittala

ವಿಜಯದಾಸ
ಇಂದು ಇಂದುಧರನ ಪಾದದ್ವಂದ್ವಗಳನು ದಿನವು |
ಎಂದೆಂದಿಗೆ ಬಿಡದೆ | ಪೊಂದಿದ್ದ ಪಾಪಗಳು |
ನಿಂದಿರದಲೆ ಓಡಿ ಬೆಂದು ಪೋದವು ನೋಡಾ ಪ

ಸತಿಗೆ ಅಧರ್Àಕಾಯ ಹಿತದಿಂದಲಿ ಇತ್ತು |
ಚತುರತನದಲಿಳೆಯೊಳು ಪತಿತ ಮಾನವರಿಗೆ |
ಮತಿಬಾಹದೊ ಮಾನಸ ಸತತ ದೃಢವನೀವ |
ಪ್ರತಿದಿನದಲಿ ಕಾಯ್ವಾ 1

ವಿಷವ ಧರಿಸಿ ಸುಮನಸರ ನಡುವೆ ಮೆರೆದೆ |
ಪಶುವಾಹನ ಪರಮೇಶ ಅಸುರಾರಿಗಲ್ಲದ |
ಅಸುರರ ಕೊಲ್ಲುವ ರಂಜಿಸುವಾ |
ಶಶಿ ಜಟಾ ಕಮನೀಯ ಮಣಿಮಕುಟಾ 2

ಕಡಲ ತಡಿಯವಾಸ | ವೊಡಿಯ ರಾಮನ ದಾಸ |
ಮೃಡರುಂಡ ಮಾಲಾಭೂಷಾ ||
ಬಿಡದೆ ಸೇತುಬಂದ ವಿಜಯವಿಠ್ಠಲನ |
ಅಡಿಗಡಿಗೆ ನೆನೆಸುವ ಶಿವರಾಮಲಿಂಗಾ 3
**********