ಆತ್ಮನಿವೇದನೆ
ನರಹರಿಯನ್ನು l ನೆರೆನಂಬಿದೆನು ನಾನು l ಕರುಣಾವಾರಿಧಿ ಪಾಲಿಸಯ್ಯ ll ಪ ll
ದುರಿತ ಸಾಗರದಿ l ಬಿದ್ದಿರುವೆ ನೀ ಮರೆಯದೇ l ತ್ವರದಿ ದಾಟಿಸೋ ಯನ್ನಾ ಜೀಯಾ ll ಅ ಪ ll
ಸ್ನಾನಕ್ಕೆ ಛಳಿಯಾಯ್ತೋ l ಧ್ಯಾನಕ್ಕೆ ಮರುವಾಯ್ತೋ l ದಾನಕ್ಕೆ ಲೋಭ ಅಡ್ಡಾಯಿತೋ l
ಮಾನಕ್ಕೆ ಕೋಪ ಬೀಜವಂಕುರಿಸಿತೋ l ಶ್ವಾನನಂದದಿ ಬಾಳಾಯ್ತೋ ll 1 ll
ಬಲೆಯಕಾಣದೇ ಮೃಗ l ಫಲ ಮೆಲುವದಕ್ಕೋಗಿ l ತಲೆ ಸಿಕ್ಕ ತೊಳಲುವ ತೆರದಿ l
ಕುಲವೃಕ್ಷ ಕೊನೆಗಿದ್ದ ಫಲದಾಸೆಗೆ ಮಾಯಾ ಬಲೆಯೊಳು ಬಿದ್ದೆನೋ ಭರದಿ ll 2 ll
ನರನಾದ ಕುರಿ ನಾನು l ಪೊರೆಯುವ ಧೊರೆ ನೀನು l ದುರಿತವ ತರಿದು ಕಾಪಾಡೋ l
ವರದ ಶ್ರೀ ಹನುಮೇಶವಿಟ್ಠಲನೆ ನಿನಗೆ ನಾ ಶರಣಾದೆ ಕರಬಿಡ ಬ್ಯಾಡೋ ll 3 ll
ನರಹರಿಯನು ನೆರೆನಂಬಿದೆನು ನಾನು ಕರುಣಾವಾರಿಧೆ
ಪಾಲಿಸಯ್ಯಾ ಪ
ದುರಿತ ಸಾಗರದಿ ಬಿದ್ದಿರುವೆ ನೀ ಮರೆಯದೆ ತ್ವರದಿ ದಾಟಿಸೋ
ಎನ್ನ ಜೀಯಾ ಅ.ಪ.
ಸ್ನಾನಕ್ಕೆ ಮೈಛಳಿಯಾಯ್ತೋ ಧ್ಯಾನಕ್ಕೆ ಮರುವಾಯ್ತೋ
ದಾನಕ್ಕೆ ಲೋಭ ಅಡ್ಡಾಯಿತೋ
ಮಾನಕ್ಕೆ ಕೋಪಬೀಜವಂಕುರಿಸಿತೋ ಶ್ವಾನನಂದದಿ ಬಾಳಾಯ್ತೋ 1
ಬಲೆಯ ಕಾಣದೇ ಮೃಗ ಫಲಮೆಲುವುದಕ್ಹೋಗಿ
ತಲೆ ಸಿಕ್ಕುತೊಳಲುವ ತೆರದಿ
ಕುಲವೃಕ್ಷ ಕೊನೆಗಿದ್ದ ಫಲದಾಸೆಗೆ ಮಾಯಾ ಬಲೆಯೊಳು
ಬಿದ್ದೆನೊ ಭರದಿ 2
ನರನಾದ ಕುರಿ ನಾನು ಪೊರೆಯುವ ಧೊರೆ ನೀನು
ದುರಿತವ ತರಿದು ಕಾಪಾಡೋ
ವರದ ಶ್ರೀ ಹನುಮೇಶವಿಠಲನೆ ನಿನಗೆ ನಾ ಶರಣಾದೆ
ಕರವ ಬಿಡಬ್ಯಾಡೊ 3
****