Tuesday, 1 June 2021

ನರಹರಿಯನು ನೆರೆನಂಬಿದೆನು ನಾನು ಕರುಣಾ ankita hanumesha vittala NARAHARIYANU NERENAMBIDENU NAANU KARUNA



 ಆತ್ಮನಿವೇದನೆ


ನರಹರಿಯನ್ನು l ನೆರೆನಂಬಿದೆನು ನಾನು l ಕರುಣಾವಾರಿಧಿ ಪಾಲಿಸಯ್ಯ ll ಪ ll


ದುರಿತ ಸಾಗರದಿ l  ಬಿದ್ದಿರುವೆ ನೀ ಮರೆಯದೇ l  ತ್ವರದಿ ದಾಟಿಸೋ ಯನ್ನಾ ಜೀಯಾ ll ಅ ಪ ll


ಸ್ನಾನಕ್ಕೆ ಛಳಿಯಾಯ್ತೋ l  ಧ್ಯಾನಕ್ಕೆ ಮರುವಾಯ್ತೋ l ದಾನಕ್ಕೆ ಲೋಭ ಅಡ್ಡಾಯಿತೋ l

ಮಾನಕ್ಕೆ ಕೋಪ ಬೀಜವಂಕುರಿಸಿತೋ l  ಶ್ವಾನನಂದದಿ ಬಾಳಾಯ್ತೋ ll 1 ll


ಬಲೆಯಕಾಣದೇ ಮೃಗ l ಫಲ ಮೆಲುವದಕ್ಕೋಗಿ l ತಲೆ ಸಿಕ್ಕ ತೊಳಲುವ ತೆರದಿ l

ಕುಲವೃಕ್ಷ ಕೊನೆಗಿದ್ದ ಫಲದಾಸೆಗೆ ಮಾಯಾ ಬಲೆಯೊಳು ಬಿದ್ದೆನೋ ಭರದಿ ll 2 ll


ನರನಾದ ಕುರಿ ನಾನು l ಪೊರೆಯುವ ಧೊರೆ ನೀನು l ದುರಿತವ ತರಿದು ಕಾಪಾಡೋ l

ವರದ ಶ್ರೀ ಹನುಮೇಶವಿಟ್ಠಲನೆ ನಿನಗೆ ನಾ ಶರಣಾದೆ ಕರಬಿಡ ಬ್ಯಾಡೋ ll 3 ll

***

ನರಹರಿಯನು ನೆರೆನಂಬಿದೆನು ನಾನು ಕರುಣಾವಾರಿಧೆ

ಪಾಲಿಸಯ್ಯಾ ಪ


ದುರಿತ ಸಾಗರದಿ ಬಿದ್ದಿರುವೆ ನೀ ಮರೆಯದೆ ತ್ವರದಿ ದಾಟಿಸೋ

ಎನ್ನ ಜೀಯಾ ಅ.ಪ.


ಸ್ನಾನಕ್ಕೆ ಮೈಛಳಿಯಾಯ್ತೋ ಧ್ಯಾನಕ್ಕೆ ಮರುವಾಯ್ತೋ

ದಾನಕ್ಕೆ ಲೋಭ ಅಡ್ಡಾಯಿತೋ

ಮಾನಕ್ಕೆ ಕೋಪಬೀಜವಂಕುರಿಸಿತೋ ಶ್ವಾನನಂದದಿ ಬಾಳಾಯ್ತೋ 1


ಬಲೆಯ ಕಾಣದೇ ಮೃಗ ಫಲಮೆಲುವುದಕ್ಹೋಗಿ

ತಲೆ ಸಿಕ್ಕುತೊಳಲುವ ತೆರದಿ

ಕುಲವೃಕ್ಷ ಕೊನೆಗಿದ್ದ ಫಲದಾಸೆಗೆ ಮಾಯಾ ಬಲೆಯೊಳು

ಬಿದ್ದೆನೊ ಭರದಿ 2


ನರನಾದ ಕುರಿ ನಾನು ಪೊರೆಯುವ ಧೊರೆ ನೀನು

ದುರಿತವ ತರಿದು ಕಾಪಾಡೋ

ವರದ ಶ್ರೀ ಹನುಮೇಶವಿಠಲನೆ ನಿನಗೆ ನಾ ಶರಣಾದೆ

ಕರವ ಬಿಡಬ್ಯಾಡೊ 3

****


No comments:

Post a Comment