Showing posts with label ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ gopalakrishna vittala. Show all posts
Showing posts with label ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ gopalakrishna vittala. Show all posts

Friday, 27 December 2019

ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ ankita gopalakrishna vittala

ಅಂಬಾಬಾಯಿ
ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ
ಶ್ರೀ ನರಹರಿ ಗತಿ ಪ್ರೀಯಾ ಪ.
ಹರಿಶಯ ಮರುತರ ಆವೇಶಕೆ ನಿಲಯಾ
ನಂಬಿದೆ ಶುಭಕಾಯಾ ಅ.ಪ.
ತರಳತನದಿ ಶ್ರೀ ನೃಹರಿ ಶಾಂತನಾಗೇ
ಸುರರೆಲ್ಲರು ನಿಮಗೇ
ಎರದÀು ಕೀರ್ತಿ ಹಿರೆತನವಹಿಸಿದ ರಾಗೇ
ಅದರಂದದಿ ಈಗೇ
ವರ ಯತಿಗಳು ಹರಿದಾಸರು ವಂದಾಗೇ
ಭಕ್ತರ ಅಘ ನೀಗೇ
ಧರೆ ಕಲ್ಪ ಧ್ರುಮವೆಂದು ನಿಮ್ಮ ಬಳಿಗೇ
ವಪ್ಪಿಸುವರು ಅಡಿಗೇ 1

ಎಮ್ಮ ಗುರುಗಳಿಂದ್ಹೇಳಿದ ನುಡಿ ಮರೆದೇ
ನಿಮ್ಮಡಿಗೆರವಾದೇ
ಸಮ್ಮತದಲಿ ಮೃತ್ತಿಕೆಯನು ಸೇವಿಸದೇ
ಹಮ್ಮಿನಲಿ ಮೈಮರೆದೇ
ನಿಮ್ಮ ಸುಕೀರ್ತಿಯ ತಿಳಿಸು ತಿಳಿಯದಾದೇ
ಅತಿ ಭಕ್ತಿಯ ಜರಿದೇ
ನಿಮ್ಮ ಕರುಣವಿರಲದರಿಂದೀಗರಿದೇ
ತನುಮನವಪ್ಪಿಸಿದೇ 2

ಒಂದೇ ಕೃತಿ ದ್ವಿದಳಾತ್ಮಕದಪರಾಧ
ಪಡಿಸಿತು ಬಹು ಬಾಧ
ಸಂದಿತು ಕಾಲವು ಮುಂದರಿಯುವ ಮೋದ
ಸಂದಿಸಿತುತ್ಸಹದಾ
ನಂದಕೆ ಕಲಿ ಮಲ ತೊಳೆಯಲು ಮೌನದಾ
ಪರಿ ಅರಿತೆ ಸುಭೋಧಾ
ಕುಂದೆಣಿಸದೆ ಪೊರೆದೆನ್ನ ನಿಮ್ಮಗಾಧಾ
ಕೃಪೆತೋರಲು ಬಹು ಮೋದಾ 3

ಎಲ್ಲಿ ನೋಡಲಲ್ಲಲ್ಲಿ ನಿಮ್ಮ ವಾಸಾ
ಪುರಗಳು ಜನ ತೋಷಾ
ಸೊಲ್ಲು ಸೊಲ್ಲಿಗೇ ನುತಿಪ ಗಾನ ಘೋಷಾ
ಮಹಿಮೆಗಳ ಪ್ರಕಾಶ
ವಲ್ಲದಾಯಿತ್ಯಾತಕೊ ಎನಗಭಿಲಾಷಾ
ಈಗಾಯಿತು ಈ ಆಶಾ
ಬಲ್ಲವರೀಪರಿ ಮಾಡುವರೇ ಮೋಸಾ
ಸದ್ಭಕ್ತರಲಾಭಾಸಾ 4

ಒಂದು ದಿನದ ಮೃತ್ತಿಕೆ ಜಲ ಸೇವಿಂದ
ಪೊಂದಿದೆ ನಿಮ್ಮ ಪದಾ
ಒಂದಾಗಲಿ ಗುರುವೆನಿಸಿದರೆಲ್ಲರದಾ
ಮನವಮ್ಮನ ವಾದಾ
ನಂದವು ಶ್ರೀ ನರಹರಿ ತಾ ಪರಿಕಿಸಿದಾ
ನಂದವು ಬಹು ಮೋದಾ
ಸಂದಲಿ ಗೋಪಾಲಕೃಷ್ಣವಿಠಲನಿಂದಾ
ಎಣಿಸದೆ ಬಹು ಕುಂದಾ 5
**********