ಕಾಖಂಡಕಿ ಶ್ರೀ ಕೃಷ್ಣದಾಸರು
ಹಾದಿಯ ಕೊಡುಹರಿ ಪರಗತಿಯಾ ಸಾಧಿಸಿ ಬಂದೇ ಕೇಳಿ ಕೀರುತಿಯಾ ಪ
ಕ್ಷಿತಿಯೊಳು ಭರತ-ಖಂಡದ ದೇಶದ ಪತಿತರ ತಾಂಡೆಯದ ನಾಯಕನು ಮತಿ ಹೀನ ಕಾಮಕ್ರೋಧರಾಗಿಹ ಪುಂಡರು ಪಥ ನಡೆಗುಡಿಸರು ಅತಿಬಲರು 1
ಆದಿಲಿ ಅಜಮಿಳಾ ತಾಂಡ್ಯ ಹೋದ ಬಳಿಕಾ ಹಾದಿ ಮುಗ್ಗಿತಿ ಕಡೆ ಬಹುದಿನದೀ | ಸಾದರಲೆನಗನಿ ಅಭಯವ ಕೊಟ್ಟರ | ಭೇದಿಸಿ ಜನರನು ನೆರಹುವೆನು 2
ಏನಾರೆ ಗೋಣಿಗೆ ಭಾವದ ಲಹರೆ ಕÉೂಂಡು ಮಾನು ಭಾವರ ಪ್ಯಾಟಿ ಹೋಗಿಸುವುದು ಘನಗುರು ಮಹಿಪತಿ ನಂದನ ಸಾರಥೀ ದೀನ ವತ್ಸಲನೆಂಬ ಬಿರುದಹುದು 3
***