Wednesday 1 September 2021

ಹಾದಿಯ ಕೊಡುಹರಿ ಪರಗತಿಯಾ ಸಾಧಿಸಿ ಬಂದೇ ಕೇಳಿ ಕೀರುತಿಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹಾದಿಯ ಕೊಡುಹರಿ ಪರಗತಿಯಾ ಸಾಧಿಸಿ ಬಂದೇ ಕೇಳಿ ಕೀರುತಿಯಾ ಪ 


ಕ್ಷಿತಿಯೊಳು ಭರತ-ಖಂಡದ ದೇಶದ ಪತಿತರ ತಾಂಡೆಯದ ನಾಯಕನು ಮತಿ ಹೀನ ಕಾಮಕ್ರೋಧರಾಗಿಹ ಪುಂಡರು ಪಥ ನಡೆಗುಡಿಸರು ಅತಿಬಲರು 1 

ಆದಿಲಿ ಅಜಮಿಳಾ ತಾಂಡ್ಯ ಹೋದ ಬಳಿಕಾ ಹಾದಿ ಮುಗ್ಗಿತಿ ಕಡೆ ಬಹುದಿನದೀ | ಸಾದರಲೆನಗನಿ ಅಭಯವ ಕೊಟ್ಟರ | ಭೇದಿಸಿ ಜನರನು ನೆರಹುವೆನು 2 

ಏನಾರೆ ಗೋಣಿಗೆ ಭಾವದ ಲಹರೆ ಕÉೂಂಡು ಮಾನು ಭಾವರ ಪ್ಯಾಟಿ ಹೋಗಿಸುವುದು ಘನಗುರು ಮಹಿಪತಿ ನಂದನ ಸಾರಥೀ ದೀನ ವತ್ಸಲನೆಂಬ ಬಿರುದಹುದು 3

***


No comments:

Post a Comment