ಕಾಖಂಡಕಿ ಶ್ರೀ ಕೃಷ್ಣದಾಸರು
ಅವಗೆಲ್ಲಿಹುದೋ ನಿಜ ಮುಕ್ತಿ | ದಾವಗಿಲ್ಲವೋ ಗುರುಪಾದ ಭಕ್ತಿ ಪ
ತಂದಿ ತಾಯಿ ಗುರು ಬಂಧು ಬಳಗಾ | ಎಂದು ಹಂಬಲಿಡದೆ ಮನಲೀಗಾ 1
ಗುರು ಕಂಡಾಗಳೆವೆ ಶರಣೆಂಬಾ | ತಿರುಗಿ ನೋಡಲು ಮರವನು ಡೊಂಬಾ2
ಹೊರಗ ದೋರುವ ಡೊಂಬ ಅನೇಕ | ಗುರುಸೇವೆಗೆ ಹೋದನು ಹೋಕಾ 3
ಪೂಜೆ ಸರ್ವೋಪಚಾರದಿ ಮಾಡಿ | ತ್ಯಾಜ ಪಡಿಯನು ಗುರುದಯ ಕೂಡಿ4
ಪರಮ ಗತಿಗಿದೇ ಕಾರಣವೆಂದು | ಗುರುಮಹಿಪತಿ ಬೋಧಿಸಿದನಿಂದು5
***
No comments:
Post a Comment