Showing posts with label ಬಂದು ನಿಮ್ಮಡಿಗಳ ನಾಶ್ರಯಿಸಿದೆ ಪ್ರಭುವೆ ankita raghavendra. Show all posts
Showing posts with label ಬಂದು ನಿಮ್ಮಡಿಗಳ ನಾಶ್ರಯಿಸಿದೆ ಪ್ರಭುವೆ ankita raghavendra. Show all posts

Thursday, 5 August 2021

ಬಂದು ನಿಮ್ಮಡಿಗಳ ನಾಶ್ರಯಿಸಿದೆ ಪ್ರಭುವೆ ankita raghavendra

 ..

kruti by radhabai

ಬಂದು ನಿಮ್ಮಡಿಗಳ ನಾಶ್ರಯಿಸಿದೆ ಪ್ರಭುವೆ

ಭವ ಬಂಧನಗಳ ಬಿಡಿಸಿ ನೀ ಕಾಯೊ ಸದ್ಗುರುವೇ ಪ


ಎಲ್ಲೆಲ್ಲಿಯೂ ತಿರುಗಿ ಕಾಯುವರ ಕಾಣದೆಲೆ

ಇಂದು ನಿಮ್ಮಯ ಪಾದಗಳ ಪಿಡಿದು ಬೇಡುವೆ ಪ್ರಭುವೇ

ತಡಮಾಡದೆಮ್ಮಯ ದುಗುಡಗಳ ಪರಿಹರಿಸಿ

ಕರುಣದಿಂದಲಿ ಕಾಯೊ ಗುರುರಾಘವೇಂದ್ರಾ 1

ನಿಶೆ ಹಗಲು ನಿನ್ನನು ಸ್ತುತಿಸಿ ಬೇಡುವೆ ಪ್ರಭುವೆ

ಗತಿಗಾಣೆ ನಿನ್ಹರತು ಈ ಪೃಥುವಿಯೊಳಗೆ

ಅತಿವ್ಯಥೆಯಲೀ ನೊಂದು ಮತಿಯಿಲ್ಲದಂತಿಹೆನು

ತ್ವರಿತದಿಂದಲಿ ಕಾಯೊ ಹೇ ಗುರುರಾಜ ಪ್ರಭುವೇ 2

ಜಗವೆಲ್ಲ ನಿಮ್ಮ ಮಹಿಮೆ ಸಾರುತಿರುವುದ ಕೇಳಿ

ಭರದಿಂದ ಬಂದೆನೋ ಗುರುರಾಘವೇಂದ್ರಾ

ಇಂದೆಮ್ಮ ಅಪರಾಧಗಳ ಎಣಿಸದೆಲೆ ಸಲಹೈಯ್ಯಾ

ಕಾರುಣ್ಯಮೂರ್ತಿ ಶ್ರೀ ಗುರುರಾಘವೇಂದ್ರಾ 3

***