Showing posts with label ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ vasudeva vittala. Show all posts
Showing posts with label ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ vasudeva vittala. Show all posts

Wednesday, 1 September 2021

ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ

ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ ಪ


ನಿತ್ಯ ಮುಕ್ತ ಪೂರ್ಣ ಕಾಮ ಒಂದಕು ಸಿಲುಕದ

ಮತ್ತೆ ಇದ್ದ ನಿನ್ನ ತನು ದೀನರ ತೋರಿ

ಹತ್ತು ಜನುಮವ ಕೊಟ್ಟು ಭಕ್ತ ಜನರ ಬಲು

ಕೃತ್ಯ ನಿಮಿತ್ಯ ಕೊಡಿಸ್ಯಾಡಿಸಿದನರಿಯ 1

ಒಂದಕೂ ಸಿಲುಕದಾ ನಿನ್ನ ವತ್ಸದ ದಾವು

ಬಂಧದಿ ಬಿಗಿಸಿತೀ ಗೋಪಿಯ ಕೈಯ

ವೃಂದಾರಕರ ಸ್ತುತಿಗೊಶವಲ್ಲದವನ ಗೋಪ

ಮಂದಿಯ ದೂರಿನ ಪಾತ್ರನ್ನ ಮಾಡಿತು 2


ಪೇಳಿಕೊಂಬಿಯೊ ಲೋಕದೊಡೆಯನು ನಾನೆಂದು

ಊಳಿಗತನ ನಿನ್ನ ಕೈಯ ಮಾಡಿಸಿತಯ್ಯ

ಕೇಳೊ ಭಕುತರಿನ್ನು ಏನಾಡಿದರನ್ನ

ತಾಳಬೇಕಾಯಿತೋ ವಾಸುದೇವವಿಠಲ 3

***