by ಗೋವಿಂದದಾಸ
ಯಾಕಿಂತು ಬಳಲುವೆಯೊ |ಈ ಕಷ್ಟಗಳಲೀಗ |ಲೋಕ ಮಾತೆಯ ಭಜಿಸಿ |ಸುಖಿಯಾಗು ಮನವೆ |ಸಾಕು ಸುಡು ಸಂಸಾರ |ಬಿಡು ಮನವೆ ಅಹಂಕಾರ |ಇಂದ್ರಿಗಳಿಗುಪಚಾರಗೈದು ಬಂದೆ1
ನೋಡುದೇವಿಯಚರಣ|ಮಾಡುದೇವಿಯ ಪೂಜೆ |ಓಡು ದೇವಿಯ ಸ್ಥಳಕೆ |ನೀಡು ದೇವಿಗೆ ಫಲ ಪುಷ್ಪ ನೈವೇದ್ಯ |ಹಾಡು ದೇವಿಯ ಚರಿತೆ ||ಆಡು ದೇವಿಯ ಮುಂದೆ |ಬೇಡು ದೇವಿಯೊಳ್ ಮುಕ್ತಿ |ಕೂಡು ದೇವಿಯ ಭಕ್ತ ಜನರ ತಂಡಾ2
ಕೇಳು ದೇವಿಯ ಕಥೆಯ |ಪೇಳು ದೇವಿಯೊಳ್ ಸ್ಥಿತಿಯ |ಗೋಳು ದೇವಿಗೆ ತಿಳಿಸಿ |ಬೀಳು ದೇವಿಯ ಪಾದದ್ವಯಗಳಲ್ಲಿ ||ಬಾಳು ದೇವಿಯ ಕೃಪೆಯೊಳ್ |ತಾಳು ದೇವಿಯ ವ್ರತವ |ನಾಳೆ ದೇವಿಯ ಸೇರಿ | ಆಳುದೇವಿಯು ಕೊಟ್ಟ ಸೌಭಾಗ್ಯಪದವಿ3
ದೇವಿ ಪದ ತೀರ್ಥಕುಡಿ|ದೇವಿ ಪ್ರಸಾದಪಡಿ|ದೇವಿ ಚರಣವನು ಹಿಡಿ |ದೇವಿ ಮೂರ್ತಿಗೆ ಪ್ರದಕ್ಷಿಣೆಯ ಮಾಡಿ ||ದೇವಿ ನಿರ್ಮಾಲ್ಯ ಮುಡಿ |ದೇವಿ ಗಂಧ ಮೈಗೆ ಬಡಿ |ದೇವಿ ಸೇವೆಮಾಡು|ದೇವಿ ನೆವೇದ್ಯ ಉಣಲಿಷ್ಟಪಡು ನೀನು4
ಮನೆಯು ನಿನ್ನದು ದೇವಿ |ಧನವು ನಿನ್ನದು ದೇವಿ |ತನಯನಿನ್ನವ ದೇವಿ |ತನುಮನವು ನಿನ್ನದೆಂದರ್ಪಿಸಲು ದೇವಿ ||ದಿನ ದಿನವು ದೇವಿ ನಿನ್ನ |ಘನದಿಮನ್ನಿಸುವಳೈ | ಅನುಮಾನ ಬೇಡ |ಗೋವಿಂದದಾಸನ ಒಡತೀ|ಶ್ರೀ ಲಕ್ಷ್ಮೀದೇವಿ5
********