Showing posts with label ಏನು ಮ್ಯಾ ರಾವಣ ನೀನು ಮ್ಯಾ ಸೀತೆಯ purandara vittala. Show all posts
Showing posts with label ಏನು ಮ್ಯಾ ರಾವಣ ನೀನು ಮ್ಯಾ ಸೀತೆಯ purandara vittala. Show all posts

Tuesday, 3 December 2019

ಏನು ಮ್ಯಾ ರಾವಣ ನೀನು ಮ್ಯಾ ಸೀತೆಯ purandara vittala

ರಾಗ ಮುಖಾರಿ. ಆದಿ ತಾಳ

ಏನು ಮ್ಯಾ ರಾವಣ
ನೀನು ಮ್ಯಾ ಸೀತೆಯ ತಂದಿದ್ಯಾ ||ಪ||
ನಿನ್ನ ಬಳಿಗೆ ರಾಮ ಎನ್ನ ಕಳುಹಿಕೊಟ್ಟ
ಇನ್ನಾದರು ಸೀತೆಯ ಬಿಡುವಿಯೇನು ಮ್ಯಾ ||ಅ||

ಕಾಣದೆ ಹೀಗೆ ಕದ್ದು ತರಬಹುದೆ
ನನ್ನಿಂದ ತಪ್ಪೆಂದು ಹೊನ್ನ
ಕಾಣಿಕೆಯಿತ್ತು ಬೆನ್ನ ಮರೆಯಾಗಿ
ನೀ ಹೋಗಬಾರದೇನು ಮ್ಯಾ ||

ಶೂರ್ಪಣಖಿಯ ಹುಚ್ಚು ಹುಚ್ಚು ಮಾತು ಕೇಳಿ
ಖರದೂಷಣರೇನಾದರು ಹೇಳು ಮ್ಯಾ ||

ತಾತ ಕೌಸಲ್ಯ ರಘುನಾಥ ಹೇಳುವನಲ್ಲ
ಈತನ ಶೌರ್ಯ ಮುಂದೆ ತಿಳಿದೀತು ಮ್ಯಾ ||

ಮಂಡೋದರಿ ಬಹಳ ಮಕ್ಕಳ ಪಡೆದಿದ್ದಾಳೆ
ಕಂಡವರ ಬಾಯಿತುತ್ತು ಮಾಡಬೇಡ ಕಾಣೊ ಮ್ಯಾ ||

ಅವ ತಾ ಮನುಜನಲ್ಲ ಪುರಂದರವಿಠಲ
ಶಿರವ ಹೊಯ್ದು ಒಯ್ಯುವನು ತಿಳಿ ಮ್ಯಾ ||
***


pallavi

Enu myA rAvaNa nInu myA sIteya tandidyA

anupallavi

ninna baLige rAma enna kaLuhikoTTa innAdaru sIteya biDuviyEnu myA

caraNam 1

kANade hIge kaddu tarabahude ninnintha tappendu honna

caraNam 2

kANikeyittu benna mareyAgi nI hOgabAradEnu myA

caraNam 3

sUrpaNageya huccu huccu mAtu kELi kharadUSaNarEnAdaru hELu myA

caraNam 4

tAta kausalya raghunAtha hELuvanalla Itana shaurya munde tiLidItu myA

caraNam 5

maNDOdari bahaLa makkaLa paDediddALe kaNDavara bAyi tuttu mADabEDa kANo myA

caraNam 6

ava tA manujanalla purandara viTTala shirava hoidu oyyuvanu tiLi myA
***