Showing posts with label ಭಾಗವತರಿಗೇ ನಮೋ ನಮೋ ಹರಿ gurumahipati. Show all posts
Showing posts with label ಭಾಗವತರಿಗೇ ನಮೋ ನಮೋ ಹರಿ gurumahipati. Show all posts

Wednesday, 1 September 2021

ಭಾಗವತರಿಗೇ ನಮೋ ನಮೋ ಹರಿ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಭಾಗವತರಿಗೇ ನಮೋ ನಮೋ ಹರಿ | ಯೋಗವುಳ್ಳವರಿಗೆ ನಮೋ ನಮೋ ಪ 


ನಂದನದೊಳಗ ಅಳಿಕುಳಗಳು ಪುಳಕುತ | ನಲುವ ಪರಿಲಿ ಗುರುವಲುವಿನಲಿ | ಕಳವಳದಳಕವಗಳದುಳದಿಳೆಯೊಳು | ಹೊಳೆಯುತಲಿಹರಿಗೆ ನಮೋ ನಮೋ 1 

ಸಿರಿ ಮದಜರಿದರಿಹರಿಯಂಕುರಮುರಿ | ದರಿಸಖರನು ಸರಿಯರಿದಿರುತಾ | ಪರಿಪರಿ ಮುಮ್ಮುಳಿ ತರುತರಿತರಿವುತ | ಚರಿಪರಿಗ್ಹರುಷದಿ ನಮೋ ನಮೋ | 2 

ಸುಜನ ಕುಜನರೊಳಗ | ಘನವನು ಸಮತಿಳಿದನು ಭವದೀ | ಅನುದಿನ ಮಹಿಪತಿ ನಂದನ ಪ್ರಭುವಿನ | ನೆನೆಯುತಲಿಹರಿಗೆ ನಮೋ ನಮೋ 3

***