Showing posts with label ಕುಣಿಸೋ ನಾರದಾ ಎನ್ನ ಕುಣಿಸೋ ನಾರದಾ indiresha. Show all posts
Showing posts with label ಕುಣಿಸೋ ನಾರದಾ ಎನ್ನ ಕುಣಿಸೋ ನಾರದಾ indiresha. Show all posts

Friday, 27 December 2019

ಕುಣಿಸೋ ನಾರದಾ ಎನ್ನ ಕುಣಿಸೋ ನಾರದಾ ankita indiresha

ಕುಣಿಸೋ ನಾರದಾ ಎನ್ನ ಕುಣಿಸೋ ನಾರದಾ ಪ

ಕುಣಿಸೋ ಎನ್ನ ಕಾಲಿಲಿಂದ ಕಣಕಣೆಂಭೊ ಗೆಜ್ಜೆಕಟ್ಟಿ ಅ.ಪ.

ಕುಣಿದು ಕುಣಿದು ಕಾಲಿನಿಂದ ವನಜನಾಭನ ಅಮಲ ಮಹಿಮೆನೆನೆದು ನೆನೆದು ಮನದಿ ಮೋದ ವನವ ಚರಿಸುವಂತೆಮಾಡೋ 1

ವದನದಲ್ಲಿ ಹರಿಯ ಸ್ಮರಣೆ ಮುದದಿ ಪಾಡುತಾಲೆ ಕಥೆಯಗದಗದಾನೆ ರೋಮ ಉಬ್ಬಿ ಒದಗುವಂತೆ ಭಾಷ್ಯ ಮಾಡೋ 2

ಏಸು ಲೇಸು ವಿಷಯಗಳಲಿ ವಾಸಮಾಡದಂಥ ಇಂದಿರೇಶಸುಕಧಾರ್ಥಸಾರ ಲೇಶ ಬಂದು ಸತತ ಮಾಡೋ 3
********