Showing posts with label ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ rukmesha. Show all posts
Showing posts with label ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ rukmesha. Show all posts

Thursday, 5 August 2021

ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ ankita rukmesha

 ..

kruti by rukmangadaru

ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ ಬಡುವಳಂತರಂಗದಲ್ಲಿ ನಿನ್ನ ಅಂಗ ತಂದು ತೋರೈ ಪ


ಮಸೆದ ಅಂಬುಗಳ ಮಿಸುನಿ ಬಣ್ಣದ ಮಲ್ಲಿಗಿಎಸೆವನು ಮನಸಿಜನು | ಕುಸುಮ ಗಂಧಿಯು ತಾನುಹಸುಮಗಳಲ್ಲವೆ ಪೊಸತಾಪ ಕಾಯಲಿಲ್ಲವೆ 1

ಕನ್ನೈದಿಲೆ ಸೌವಿಸು ಕಣ್ಣುಗಳಿಂದ ನಿನ್ನರ್ಚಿಸುವೆ ತವಕದಿ |ತನ್ನಾದ ಬೊಂಬೆ ತಾ ಎನ್ನ ನಿಮ್ಮ ಬಳಿಯಲಿಮನ್ನಿಸಿ ಕಳುಹಿದಳೈ 2

ಮುನಿದಗಲಿರುವದು ಮುನಿಜನ ವಂದ್ಯಗೆ ಮುನಿಗಳೊಪ್ಪರೀ ಮಾತನು ಕನಸಿನೊಳವಳ ಕೂಡ ಅನುಭವಿಸುವಾತಂಗೆಜನದ ನಾಚಿಕೆ ಯಾತಕೈ 3

ಅಂಚಗಮನಿ ತಾ ಮಿಂಚು ಮಂಚವ ಕಂಡುಸಂಚಿತವನು ನೆನೆವಳ ವಂಚನೆಯ ಬಿಟ್ಟುಮುಚ್ಚಾವಳ ಕೂಡೈ ನೀ ಕೆಂಚಿಯರಸರೊಲ್ಹದು 4

ಇಂದು ಮುಖಿಯು ತಾ ಕುಂದಿ | ಕುಂದದಳರವಿಂದ ಸರಳ ತಾಪದಿ | ಮಂದರ ಧರನೀಗ ಬಂದು ಸಂಮಿಸುವದು ರುಕ್ಮಕಂದನ ಸೊಲ್ಲಿಗೆ 5

***