Thursday, 5 August 2021

ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ ankita rukmesha

 ..

kruti by rukmangadaru

ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ ಬಡುವಳಂತರಂಗದಲ್ಲಿ ನಿನ್ನ ಅಂಗ ತಂದು ತೋರೈ ಪ


ಮಸೆದ ಅಂಬುಗಳ ಮಿಸುನಿ ಬಣ್ಣದ ಮಲ್ಲಿಗಿಎಸೆವನು ಮನಸಿಜನು | ಕುಸುಮ ಗಂಧಿಯು ತಾನುಹಸುಮಗಳಲ್ಲವೆ ಪೊಸತಾಪ ಕಾಯಲಿಲ್ಲವೆ 1

ಕನ್ನೈದಿಲೆ ಸೌವಿಸು ಕಣ್ಣುಗಳಿಂದ ನಿನ್ನರ್ಚಿಸುವೆ ತವಕದಿ |ತನ್ನಾದ ಬೊಂಬೆ ತಾ ಎನ್ನ ನಿಮ್ಮ ಬಳಿಯಲಿಮನ್ನಿಸಿ ಕಳುಹಿದಳೈ 2

ಮುನಿದಗಲಿರುವದು ಮುನಿಜನ ವಂದ್ಯಗೆ ಮುನಿಗಳೊಪ್ಪರೀ ಮಾತನು ಕನಸಿನೊಳವಳ ಕೂಡ ಅನುಭವಿಸುವಾತಂಗೆಜನದ ನಾಚಿಕೆ ಯಾತಕೈ 3

ಅಂಚಗಮನಿ ತಾ ಮಿಂಚು ಮಂಚವ ಕಂಡುಸಂಚಿತವನು ನೆನೆವಳ ವಂಚನೆಯ ಬಿಟ್ಟುಮುಚ್ಚಾವಳ ಕೂಡೈ ನೀ ಕೆಂಚಿಯರಸರೊಲ್ಹದು 4

ಇಂದು ಮುಖಿಯು ತಾ ಕುಂದಿ | ಕುಂದದಳರವಿಂದ ಸರಳ ತಾಪದಿ | ಮಂದರ ಧರನೀಗ ಬಂದು ಸಂಮಿಸುವದು ರುಕ್ಮಕಂದನ ಸೊಲ್ಲಿಗೆ 5

***


No comments:

Post a Comment