Showing posts with label ವಂದಿಸುವೆನು ನಿನ್ನ ಅರವಿಂದಲೋಚನದಿಂದ ನೋಡೊ ನೀ ಎನ್ನ bheemesha krishna. Show all posts
Showing posts with label ವಂದಿಸುವೆನು ನಿನ್ನ ಅರವಿಂದಲೋಚನದಿಂದ ನೋಡೊ ನೀ ಎನ್ನ bheemesha krishna. Show all posts

Wednesday, 1 September 2021

ವಂದಿಸುವೆನು ನಿನ್ನ ಅರವಿಂದಲೋಚನದಿಂದ ನೋಡೊ ನೀ ಎನ್ನ ankita bheemesha krishna

 ..

ವಂದಿಸುವೆನು ನಿನ್ನ ಅರವಿಂದಲೋಚನ-

ದಿಂದ ನೋಡೊ ನೀ ಎನ್ನ

ವಂದಿಸುವೆ ಅರವಿಂದಲೋಚನ-

ದಿಂದ ನೋಡೊ ದಯಾಸಿಂಧು ಎನಿಸುವೆ

ನಂದನಂದನನಾದ ಶ್ರೀ ಮುಕುಂದ ನೀ ಮುಚು-

ಕುಂದ ವರದ ವಂದಿಸುವೆನು ನಿನ್ನ ಪ


ಅಂಬರೀಷನು ಏನೋ ಮುಚುಕುಂದ ಮುನಿವರ-

ನೆಂದು ರಕ್ಷಿಸುವೇನೊ ದ್ವಿಜ ತಂದವಲಕ್ಕಿ

ತಿಂದ ಭಿಡೆಯಗಳೇನೊ ನೀನೆ ಸುರಧೇನು

ಕಂದ ಧ್ರುವಪ್ರಹ್ಲಾದ ಕರೆಯಲು

ಬಂದು ಭರದಿಂದವರ ಸಲಹಿದೆ ಮಂದಮತಿ ನಾ ಮ-

ತ್ತೊಂದನರಿಯದೆ ವಂದಿಸುವೆ ನಿನ್ನ 1


ಗಜನು ಅಜಮಿಳನೇನೊ ಪಾದಾಂಬುಜ ಸ್ತುತಿಸ-

ಲಜಸುತನು ನಾರದನೇನೊ

ನಿಜ ಭಕುತಿಯಿಂದಿರಲ್ವಿದುರ ಉದ್ಧವನೇನೊ

ನದಿಯಲ್ಲಿ ನಿನ್ನ ನಿಜಸ್ವರೂಪವ ತೋರಲಿಕ್ಕೆ

ನಿನ್ನ ಬಾಂಧವಕ್ರೂರನೇ ನಾ ಕೇಳು ಘನ್ನ ಮಹಿಮ

ಪ್ರಸನ್ನನಾಗಲಿಕ್ವಂದಿಸುವೆನು ನಿನ್ನ 2


ಸತ್ವರೊಳು ನಾನಲ್ಲ ಅಹಲ್ಯೆ ದ್ರೌಪದಿ ಭಕ್ತಿ

ಮೊದಲೆನಗಿಲ್ಲ ಪಾಂಡವರ ದುರಿತಾಪತ್ತು

ಕಳೆದ್ಯೊ ನೀಯೆಲ್ಲ ಕೇಳೆನ್ನ ಸೊಲ್ಲ

ಭಕ್ತಾಧೀನನೆ ಭಯನಿವಾರಣ

ಇಷ್ಟು ಭವಭಯ ಬಿಡಿಸಿ ಭೀಮೇಶಕೃಷ್ಣ ನಿನ್ನದಯ-

ವಿಟ್ಟುಕರುಣಿಸೊ ವಂದಿಸುವೆನು ನಿನ್ನ 3

***