Wednesday 1 September 2021

ವಂದಿಸುವೆನು ನಿನ್ನ ಅರವಿಂದಲೋಚನದಿಂದ ನೋಡೊ ನೀ ಎನ್ನ ankita bheemesha krishna

 ..

ವಂದಿಸುವೆನು ನಿನ್ನ ಅರವಿಂದಲೋಚನ-

ದಿಂದ ನೋಡೊ ನೀ ಎನ್ನ

ವಂದಿಸುವೆ ಅರವಿಂದಲೋಚನ-

ದಿಂದ ನೋಡೊ ದಯಾಸಿಂಧು ಎನಿಸುವೆ

ನಂದನಂದನನಾದ ಶ್ರೀ ಮುಕುಂದ ನೀ ಮುಚು-

ಕುಂದ ವರದ ವಂದಿಸುವೆನು ನಿನ್ನ ಪ


ಅಂಬರೀಷನು ಏನೋ ಮುಚುಕುಂದ ಮುನಿವರ-

ನೆಂದು ರಕ್ಷಿಸುವೇನೊ ದ್ವಿಜ ತಂದವಲಕ್ಕಿ

ತಿಂದ ಭಿಡೆಯಗಳೇನೊ ನೀನೆ ಸುರಧೇನು

ಕಂದ ಧ್ರುವಪ್ರಹ್ಲಾದ ಕರೆಯಲು

ಬಂದು ಭರದಿಂದವರ ಸಲಹಿದೆ ಮಂದಮತಿ ನಾ ಮ-

ತ್ತೊಂದನರಿಯದೆ ವಂದಿಸುವೆ ನಿನ್ನ 1


ಗಜನು ಅಜಮಿಳನೇನೊ ಪಾದಾಂಬುಜ ಸ್ತುತಿಸ-

ಲಜಸುತನು ನಾರದನೇನೊ

ನಿಜ ಭಕುತಿಯಿಂದಿರಲ್ವಿದುರ ಉದ್ಧವನೇನೊ

ನದಿಯಲ್ಲಿ ನಿನ್ನ ನಿಜಸ್ವರೂಪವ ತೋರಲಿಕ್ಕೆ

ನಿನ್ನ ಬಾಂಧವಕ್ರೂರನೇ ನಾ ಕೇಳು ಘನ್ನ ಮಹಿಮ

ಪ್ರಸನ್ನನಾಗಲಿಕ್ವಂದಿಸುವೆನು ನಿನ್ನ 2


ಸತ್ವರೊಳು ನಾನಲ್ಲ ಅಹಲ್ಯೆ ದ್ರೌಪದಿ ಭಕ್ತಿ

ಮೊದಲೆನಗಿಲ್ಲ ಪಾಂಡವರ ದುರಿತಾಪತ್ತು

ಕಳೆದ್ಯೊ ನೀಯೆಲ್ಲ ಕೇಳೆನ್ನ ಸೊಲ್ಲ

ಭಕ್ತಾಧೀನನೆ ಭಯನಿವಾರಣ

ಇಷ್ಟು ಭವಭಯ ಬಿಡಿಸಿ ಭೀಮೇಶಕೃಷ್ಣ ನಿನ್ನದಯ-

ವಿಟ್ಟುಕರುಣಿಸೊ ವಂದಿಸುವೆನು ನಿನ್ನ 3

***


No comments:

Post a Comment