Showing posts with label ನರವರ್ಯ ಭೀಮಸೇನ ನಾರಿಗೆ ಕುಸುಮ purandara vittala. Show all posts
Showing posts with label ನರವರ್ಯ ಭೀಮಸೇನ ನಾರಿಗೆ ಕುಸುಮ purandara vittala. Show all posts

Friday, 6 December 2019

ನರವರ್ಯ ಭೀಮಸೇನ ನಾರಿಗೆ ಕುಸುಮ purandara vittala

ರಾಗ ಆರಭಿ. ತ್ರಿಪುಟ ತಾಳ 

ನರವರ್ಯ ಭೀಮಸೇನ ನಾರಿಗೆ ಕುಸುಮ
ತರುವೆನೆನುತ ಬೇಗ ತೆರಳಿದನು
ಕರಿರಾಜನಂತೆ ದೊಡ್ಡ ಕಾನನ ಮಧ್ಯ
ಗಿರಿವರನೇರಿದನ ಗುರು ಪುಂಗವ ||೧||

ಕನಕದ ವೃಕ್ಷವ ಕರದಲಿ ಪಿಡಿದನು
ಧನುಸು ಬಾಣಂಗಳ ಧರಿಸಿಕೊಂಡು
ಮನೋವೇಗದಿಂದ ಬಂದು ಮಹಾಬಲಸಿಂಧು
ಹನುಮನೆಂಬವನ ಕಂಡ ಹರುಷದಿಂದ ||೨||

ಕದಳಿಯ ಬನದಲಿ ಕಂಡನೆ ಹನುಮನ
ಎದುರಿಲ್ಲದೆ ಕುಳಿತು ನಿದ್ರೆಗೆಯ್ಯುವನ
ಮುದಿದಿಂದ ನುಡಿಸೆ ಬೆದರಿಸಿ ನುಡಿದನು
ಎದುರಾಗಿದ್ದ ಕಪಿ ಏಳೆಂದು ಭೀಮ ||೩||

ಭೀಮನ ಮಾತ ಕೇಳಿ ಭೀತಿಯಿಲ್ಲದೆ ಹನುಮ
ಸಾಮದಿ ನುಡಿದನು ಸೋಮವಂಶಜನ
ಈ ಮೃಗಗಳ ತಂದೆ ಯಾರ ಕಂದನೊ ನೀನು
ಪ್ರೇಮದಿಂದಲಿ ಎನಗೆ ಪೇಳೆಂದನಾಗ ||೪||

ಗುರುರಾಯ ವಂಶದಿ ಕುಂತಿಯ ಜಠರದಿ
ಮರುತರಾಯರಿಂದ ಜನಿಸಿದ ಭೀಮನು
ದುರುಳ ಹಿಡಿಂಬಕ ದುಷ್ಟ ಕಿರ್ಮೀರನ
ಕರುಳುಗಳ ಬಗಿದು ಬಂದವ ನಾನು ||೫||

ಹನುಮ ಕಾಣೆಲೊ ನಾನು ಹರಿ ರೂಪ ರಾಘವರ
ಮನವನರಿತು ಸೇವೆ ಮಾಡಿದ ದೂತನು
ವನಧಿಯ ದಾಟಿ ಬಂದೆ, ವನಜಾಕ್ಷಿಗುಂಗುರವಿತ್ತೆ
ವನವ ಕಿತ್ತೆ ಲಂಕೆ ಉರಿ ಮಾಡಿದೆ ||೬||

ರಾಮರ ದಯದಿಂದ ರಾಕ್ಷಸರನು ಗೆದ್ದೆ
ಭೂಮಿ ದಾರ್‍ಇ ಹಿಡಿದೆಜ್ಞಶಾಲೆಯ
ಆದರೇನಾಯಿತು ಹಾಟಕಾದ್ರಿ ಸರಿಯಾದ
ಭಾಗವತ ತೋರಿಸಿದ ಗುರುಮುಖ್ಯಗೆ ||೭||

ಕಂಡೆನೇನಯ್ಯ ನಿನ್ನ ರೂಪ ಕಾಣದ ಮನುಜಗೆ
ದಂಡಪ್ರಣಾಮ ಮಾಡಿ ದಾರಿತೋರಿದ
ಪಾಂಡವನೆನಿಸಿ ದೊಡ್ಡ ಪರ್ವತದ ಮಧ್ಯದಲಿ
ಚಂಡದೈತ್ಯರ ಸುತ್ತಿ ಚೆಂಡನಾಡಿದ ||೮||

ಶೀತಳ ಸರೋವರ ಶೀಘ್ರದಿಂದಲಿ ದಾಟಿ
ನೂತನ ಕುಸುಮಂಗಳ ನೂರಾರು ತಂದು
ಪ್ರೀತಿಯಿಂದಲಿ ತನ್ನ ಪ್ರಿಯಳಿಗಿತ್ತನು
ಭ್ರಾತೃಗಳ ಪಡೆದ ಭಾಗ್ಯವೇನೆಂದ ||೯||

ಒಬ್ಬನೆ ಸಕಲ ಓದಿದ ಮನುಜಗೆ
ಇಬ್ಬರ ಭಾಗವ ತೋರಿ ಈ ರೀತಿಯಿಂದ
ಸಬ್ರಹ್ಮಪದವಿತ್ತ ಪುರಂದರವಿಠಲ
ಸುಬ್ರಹ್ಮಣ್ಯ ವೇದಾಂತನಿಧಿಗೆ ||೧೦||
***

pallavi

naravarya bhImasEna.
1: naravarya bhImasEna nArige kusuma taruvevenuta bEga teraLidanu
karirAjanante doDDa kAnana madhya girivaranEridana guru pungava

caraNam 2

kanakada vrukSava karadali piDidanu dhanusu bANangaLa dharisi koNDu
manOvEgadinda bandu mahA bala sindhu hanumanembavana kaNDa haruSadinda

caraNam 3

kadaLiya panadali kaNDane hanumana edurillade kuLidu nidre geyyuvana
mudidinda nuDise bedarisi nuDidanu edurAgidda kapi Elendu bhIma

caraNam 4

bhImana mAta kELi bhItiyillade hanuma sAmadi nuDidanu sOma vamsha jana
I mrgagaLa tande yAra kandano nInu prEmadindali enage bELendanAga

caraNam 5

gururAya vamshadi kuntiya jaTharadi marutarAyarinda janisida bhImanu
duruLa hiDimbaka duSTa kirmIrana karuLugaLa bagidu bandava nAnu

caraNam 6

hanuma kAnelo nAnu hari rUpa rAghavana manavaridu sEve mADida dUtanu
vanadhIya dATi bande vanajAkSi gunguravitte vanava kitte lanke uri mADide

caraNam 7

rAmara dayadinda rAkSasaranu gedde bhUmi dARi hiDi dejna shAleya
AdarEnAyitu hATakAdri sariyADa bhAgavata tOrisida gurumukhyage

caraNam 8

kaNDEnEnayya ninna rUpa kANada manujage daNDa praNAma mADi dAri tOrida
pANDavanenisi doDDa parvatada madhyadali caNDa daityara sutti ceNDanADida

caraNam 9

shItaLa sarOvara shIghradindali dATi nUtana kusumangaLa nUrAru tandu
prItiyindali tanna prIyaLigittanu bhrAtrugaLa paDeda bhAgyavEnande

caraNam 10

obbane sakala Odida manujage ibbara bhAgava tOri I rItiyinda
sabrahma padavitta purandara viTTala subrahmaNya vEdAnta nidhige
***