Showing posts with label ರಾಮ ರಕ್ಷಿಸೋ ಕೋದಂಡಪಾಣಿ others. Show all posts
Showing posts with label ರಾಮ ರಕ್ಷಿಸೋ ಕೋದಂಡಪಾಣಿ others. Show all posts

Friday, 27 December 2019

ರಾಮ ರಕ್ಷಿಸೋ ಕೋದಂಡಪಾಣಿ others

ದ್ವಿಜಾವಂತಿ ರಾಗ

ರಾಮ ರಕ್ಷಿಸೋ ಕೋದಂಡಪಾಣಿ
ರಾಮ ರಕ್ಷಿಸೋ || ಪ||

ಬಾಲತನದೊಳು ಬಹು ಲೀಲೆಯೊಳಗಿದ್ದೆ
ಮೇಲೆ ಯೌವನದಲಿ ನಿಮ್ಮ ಪೂಜಿಸದೆ
ಜಾಲ ಸ್ತ್ರೀಯರ ಕೂಡಾಡಿ ಮರುಳಾದೆ
ಕಾಲನ ಬಾಧೆಗೆ ನಾನು ಗುರಿಯಾದೆ ||೧||

ಅಜಮಿಳಗೊಲಿದು ಅಂಬರೀಶನ ಕಾಯ್ದೆ
ಗಜರಾಜ ದ್ರೌಪದಿಯರ ರಕ್ಷಿಸಿದೆ
ಭಜಿಸುವ ಭಕ್ತರ ಪಾಪವ ಹರಿದೆ ಸಿರಿ-
ಅಜ ನಿನ್ನ ನೆನೆಯದೆ ನಾ ಮರುಳಾದೆ ||೨||

ಪೊಡವಿಗಧಿಕವೆಂದು ಕಡಬಡಿ ನಿಂದೆ
ದೃಢ ಭಕ್ತರನು ಪೊರೆವ ಕರುಣಾಸಿಂಧು
ಕಡು ಚೆಲ್ವ ರಾಮಮೂರುತಿ ಗತಿಯೆಂದು
ಬಿಡದೆ ನಂಬಿದೆ ನಿನ ಪಾದವ ಬಂದು ||೩||
*******