Showing posts with label ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ vijaya vittala. Show all posts
Showing posts with label ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ vijaya vittala. Show all posts

Wednesday, 16 October 2019

ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ ankita vijaya vittala

ವಿಜಯದಾಸ
ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ ಪ

ಅಸುರ ತಾರಕನು ಸುಮನಸರ ಬಳಲಿಸುತಿರಲು
ಬಿಸಿಗಣ್ಣವನ ತಪಸು ಹಾನಿಮಾಡಿ
ಶಶಿವದನೆ ಪಾರ್ವತಿಯಲ್ಲಿ ಗರ್ಭವನಿಡಿಸಿ
ಹಸುಳೆ ಕೈಯಿಂದ ರಾಕ್ಷಸನ ಕೊಲ್ಲಿಸಿದೆ 1

ಶಂಬರ ದೈತ್ಯಜನ ವರದಿಂದ ಅನಿಮಿಷ-ಕ
ದಂಬವನು ಸೋಲಿಸಿ ಮೆರೆವುತಿರಲು
ಅಂಬುತನಯುದರದಲ್ಲಿ ಹೊಕ್ಕು ಬೆಳೆದದು ಬಂಡು
ಅಂಬರರು ನಲಿಯೆ ವನಶಿರವ ಚಂಡಾಡಿದಾ 2

ಮನಮುಟ್ಟಿ ನಿನ್ನನು ವಂದನೆಮಾಡಿ ನರಗೆ
ಮನದ ತಾಪವ ಬಿಡಿಸಿ ಮುಕ್ತಿ ಕೊಡುವಾ
ಸಿರಿ ವಿಜಯವಿಠ್ಠಲರೇಯನ
ಅನುಸರಿಸಿ ಬಾಳುವಂತೆ ಏಕಚಿತ್ತವನೀವಾ 3
*********