ತೆರಳಿದರು ವ್ಯಾಸತತ್ವಜ್ಞರಿಂದು
ಪುರುಷೋತ್ತಮನ ಗುಣಗಳರುಪಿ ಸುಜನರಿಗೆ ||pa||
ವರ ರೌದ್ರಿನಾಮ ಸಂವತ್ಸರದ ಶ್ರಾವಣ
ಪರಪಕ್ಷ ಅಷ್ಟಮಿ ಭಾನುವಾರ
ಭರಣಿ ನಕ್ಷತ್ರ ಪ್ರಾತಃಕಾಲದಲಿ ಸೋಮ
ಪುರದಿ ಗೋಪಾಲಕೃಷ್ಣನ ಪಾದ ಸನ್ನಿಧಿಗೆ ||1||
ವೇದಾಬ್ಜಭವಸೂತ್ರ ಭಾಷ್ಯ ಭಾಗವತ ಮೊದ
ಲಾದ ಶಾಸ್ತ್ರಗಳ ಕೀರ್ತನೆಗೈಯುತಾ
ಪಾದೋದಕವ ಶಿರದಿ ಧರಿಸುತಿಪ್ಪ ವರಘತಿ
ರೋಧಾನಗೈಸಿ ಪರಗತಿ ಮಾರ್ಗವನು ತೋರಿ ||2||
ಸೋಜಿಗವಿದಲ್ಲ ಸಜ್ಜನರನುದ್ಧರಿಸುವುದು
ನೈಜ ಜಗನ್ನಾಥ ವಿಠ್ಠಲನ ಪಾದ
ರಾಜೀವಯುಗಳ ನಿವ್ರ್ಯಾಜದಲಿ ಭಜಿಪ ಪ್ರ
ಯೋಜನನೊರೆದಿತರ ವ್ಯಾಪಾರ ತೊರೆದು ||3||
***
teraLidaru vyAsatatvaj~jarindu
puruShOttamana guNagaLarupi sujanarige ||pa||
vara raudrinAma saMvatsarada SrAvaNa
parapakSha aShTami BAnuvAra
BaraNi nakShatra prAtaHkAladali sOma
puradi gOpAlakRuShNana pAda sannidhige ||1||
vEdAbjaBavasUtra BAShya BAgavata moda
lAda SAstragaLa kIrtanegaiyutA
pAdOdakava Siradi dharisutippa varaGati
rOdhAnagaisi paragati mArgavanu tOri ||2||
sOjigavidalla sajjanaranuddharisuvudu
naija jagannAtha viThThalana pAda
rAjIvayugaLa nivryAjadali Bajipa pra
yOjananoreditara vyApAra toredu ||3||
***