ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಸಾಗರ ವರಮುನಿಗಳ ಪ್ರಾಣ ಶರಣಜನರಾಭರಣ ನಮ್ಮ ಶ್ರೀ ಗುರುನಾಥ 1
ಮೂರುಮೂರುತಿನೀತ ಮೂರು ಲೋಕ ವಂದಿತ ಮೂರುಗುಣರಹಿತ ನಮ್ಮ ಶ್ರೀಗುರುನಾಥ 2
ನಂಬಿದವರ ಕಾವ ಹಂಬಲಿಸುವ ಜೀವ ಅಂಬುಜಾಕ್ಷನೆ ಶ್ರೀದೇವ ನಮ್ಮ ಶ್ರೀ ಗುರುನಾಥ 3
ಭಕ್ತವತ್ಸಲನೀತ ಭಕ್ತರ ಭಾವಪೂರಿತ ಶಕ್ತನಹುದಯ್ಯನೀತ ನಮ್ಮ ಶ್ರೀ ಗುರುನಾಥ4
ಇಹಪರ ನಮಗೀತ, ಸಾಹ್ಯದಲಿ ಸಮರ್ಥ ಮಹಿಪತಿ ಪ್ರಾಣನಾಥ ನಮ್ಮ ಶ್ರೀ ಗುರುನಾಥ 5
***