Showing posts with label ದೀನನಾದೆನು ನಾನು ಅನಾಥನಾದೆನು krishnavittala. Show all posts
Showing posts with label ದೀನನಾದೆನು ನಾನು ಅನಾಥನಾದೆನು krishnavittala. Show all posts

Monday, 6 September 2021

ದೀನನಾದೆನು ನಾನು ಅನಾಥನಾದೆನು ankita krishnavittala

ರಾಗ: ಕೇದಾರಗೌಳ ತಾಳ: ರೂಪಕ

ದೀನನಾದೆನು ನಾನು ಅನಾಥನಾದೆನು


ದೀನರಕ್ಷಕ ಗುರು ರಾಘವೇಂದ್ರನೆ ಕಾಯೋ ಅ.ಪ


ಆದರಿಸುವದಿಲ್ಲ ಆಧಾರವೆನಗಿಲ್ಲ

ಆಧಿವ್ಯಾಧಿಗಳೆನ್ನ ಭಾದಿಸುತಿವೆಯಲ್ಲ

ವೇದನೆ ಪಡುತಿಹೆ ಹಾದಿ ತೋರದು ಎನಗೆ 

ವೇದಾಂತವೇದ್ಯನೆ ಪಾದಸ್ಮರಣೆ ನೀಡೋ 1

ಕಾಯವು ದಣಿಯಿತು ಕಾಯುವರಾರಿಲ್ಲ

ಕಾಯಲಾರೆನು ಸ್ವಾಮಿ ಕಾಯವು ಸ್ಥಿರವಲ್ಲ

ಮಯಾಪಾಶದಿ ನಾನು ಭಯವ ಹೊಂದಿಹೆನಯ್ಯ

ಕಾಯಜಪಿತನಂಘ್ರಿ ತೋರಿ ಕಾಯೈಎನ್ನ 2

ತುಚ್ಚದೇಹಕ್ಕಾಗಿ ವೆಚ್ಚ ಮಾಡಿದೆ ಕಾಲ

ಸ್ವಚ್ಚಮನದಿ ನಿನ್ನ ಅರ್ಚಿಸದೆ ಕೆಟ್ಟೆ

ಕಿಚ್ಚಿನೊಳಗಣ ಕೀಟದಂದದಿ ಬೆಂದಿಹೆ

ಅಚ್ಯುತ ಸಿರಿಕೃಷ್ಣವಿಠಲನಂಘ್ರಿಯ ತೋರೋ 3

***