ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ || ಪ ||
ಇಂದಿರೆಯನರಸನ ಚಂದದಿ ಭಜಿಸುವ
ಕುಂದುರಹಿತ ರಾಘವೇಂದ್ರ ಕಾಣಮ್ಮ || ಅ ||
ಮಂತ್ರಾಲಯಕೃತಮಂದಿರನೆನಿಸುವನ್ಯಾರೇ ಪೇಳಮ್ಮಯ್ಯ
ತಂತ್ರದೀಪಿಕಾ ಗ್ರಂಥಕರ್ತನ್ಯಾರೇ ಪೇಳಮ್ಮಯ್ಯ
ಕಂತುಪಿತನ ಸತ್ಪಂಥದಿ ಭಜಿಸುವನ್ಯಾರೇ ಪೇಳಮ್ಮಯ್ಯ
ಚಿಂತಿತಫಲದ ದುರಂತಶಕ್ತ ಜಯವಂತ ನೀತ ಅಘಶಾಂತ ಕಾಣಮ್ಮ || ೧ ||
ಶ್ರೀಸುಧೀಂದ್ರಕರಕಮಲಜನೆನಿಸುವನ್ಯಾರೇ ಪೇಳಮ್ಮಯ್ಯ
ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೇ ಪೇಳಮ್ಮಯ್ಯ
ಆಶುಗಮನಮತ ಸ್ಥಾಪಕನೆನಿಸುವನ್ಯಾರೇ ಪೇಳಮ್ಮಯ್ಯ
ಭಾಸುರಜ್ಞಾನ ವಿಶೇಷವಾಗಿ ಹರಿದಾಸ್ಯವ ಪಡೆದ ಯತೀಶ ಕಾಣಮ್ಮ || ೨ ||
ಧಾರುಣಿಪತಿಸುತೆ ತೀರದಿ ನೆಲೆಸಿಹನ್ಯಾರೇ ಪೇಳಮ್ಮಯ್ಯ
ಸಾರಿದ ಭಜಕರ ಬಾರಿಗೆ ಪೊರೆಯುವನ್ಯಾರೇ ಪೇಳಮ್ಮಯ್ಯ
ಕಾರುಣ್ಯನಿಧಿ ಅಪಾರ ಮಹಿಮನಿವನ್ಯಾರೇ ಪೇಳಮ್ಮಯ್ಯ
ನಾರಾಯಣ ತಂದೆಶ್ರೀಪತಿವಿಠ್ಠಲನ ಆರಾಧಿಪ ರಾಘವೇಂದ್ರ ಕಾಣಮ್ಮ || ೩ ||
****
ರಾಗ : ಮೋಹನ ತಾಳ : ರೂಪಕ (raga, taala may differ in audio)
ವೃಂದಾವನದಲಿ ರಾಜಿಪ
ಯತಿವರನ್ಯಾರೇ ಪೇಳಮ್ಮಯ್ಯಾ ।। ಪಲ್ಲವಿ ।।
ಇಂದಿರೆಯರಸನ ಚಂದದಿ ಭಜಿಸುವ ।
ಕುಂದು ರಹಿತ ರಾಘವೇಂದ್ರ ಕಾಣಮ್ಮಾ ।। ಅ ಪ ।।
ಮಂತ್ರಾಲಯ ಕೃತ ಮಂದಿರ-
ನೆನಿಸುವನ್ಯಾರೆ ಪೇಳಮ್ಮಯ್ಯಾ ।
ತಂತ್ರದೀಪಿಕಾ ಮುಖ ಗ್ರಂಥಕರ್ತ
ನೆನಿಸುವನ್ಯಾರೇ ಪೇಳಮ್ಮಯ್ಯಾ ।
ಕಂತುಪಿತನ ಸತ್ಪಂಥದಿ
ಭಜಿಸುವನ್ಯಾರೆ ಪೇಳಮ್ಮಯ್ಯಾ ।
ಚಿಂತಿತ ಫಲದ ದುರಂತಶಕ್ತ
ಜಯವಂತನೀತ
ಅಘಶಾಂತ ಕಾಣಮ್ಮಾ ।। ಚರಣ ।।
ಶ್ರೀ ಸುಧೀಂದ್ರ ಕರಕಮಲಜ
ನೆನಿಸುವನ್ಯಾರೇ ಪೇಳಮ್ಮಯ್ಯಾ ।
ತಾ ಸ್ವಪ್ನದಿ ಮಂತ್ರಾಕ್ಷತೆ
ಕೊಡುತಿಹನ್ಯಾರೇ ಪೇಳಮ್ಮಯ್ಯಾ ।
ಆಶುಗಮನಮತ ಸ್ಥಾಪಕ
ನೆನಿಸುವನ್ಯಾರೇ ಪೇಳಮ್ಮಯ್ಯಾ ।
ಭಾಸುರಜ್ಞಾನಿ ವಿಶೇಷವಾಗಿ ಹರಿ
ದಾಸ್ಯವ ಪಡೆದ
ಯತೀಶ ಕಾಣಮ್ಮಾ ।। ಚರಣ ।।
ಧಾರುಣಿಪತಿಸುತೆ ತೀರದಿ
ನೆಲೆಸಿಹನ್ಯಾರೆ ಪೇಳಮ್ಮಯ್ಯಾ ।
ಸಾರಿದ ಭಾಜಕರ ಬಾರಿಬಾರಿಗೆ
ಪೊರೆಯುವನ್ಯಾರೆ ಪೇಳಮ್ಮಯ್ಯಾ ।
ಕಾರುಣ್ಯನಿಧಿ ಅಪಾರ
ಮಹಿಮ ನಿವನ್ಯಾರೆ ಪೇಳಮ್ಮಯ್ಯಾ ।
ನಾರಾಯಣ ತಂದೆ ಶ್ರೀಪತಿ -
ವಿಠ್ಠಲನ ಆರಾಧಿಪ
ರಾಘವೇಂದ್ರ ಕಾಣಮ್ಮಾ ।। ಚರಣ ।।
***
kruti by ತಂದೆಶ್ರೀಪತಿವಿಠಲ
ರಾಗ: ಮೋಹನ /ರೇಗುಪ್ತಿ ತಾಳ: ಅಟ/ರೂಪಕ
ವೃಂದಾವನದಲಿ ರಾಜಿಪ ಯತಿವರನ್ಯಾರೆ ಪೇಳಮ್ಮಯ್ಯ ಪ
ಇಂದಿರೆಯರಸನ ಚಂದದಿ ಭಜಿಸುವ
ಕುಂದುರಹಿತ ರಾಘವೇಂದ್ರ ಕಾಣಮ್ಮ ಅ.ಪ
ಮಂತ್ರಾಲಯಕೃತ ಮಂದಿರನೆನಿಸುವನ್ಯಾರೆ ಪೇಳಮ್ಮಯ್ಯ
ತಂತ್ರದೀಪಿಕಾ ಮುಖಗ್ರಂಥಕರ್ತನೆನಿಸುವನ್ಯಾರೆ ಪೇಳಮ್ಮಯ್ಯ
ಕಂತುಪಿತನಸತ್ಪಂಥದಿ ಭಜಿಸುವನ್ಯಾರೆ ಪೇಳಮ್ಮಯ್ಯ
ಚಿಂತಿತಫಲದ ದುರಂತಶಕ್ತ ಜಯವಂತನೀತ ಅಘಶಾಂತ ಕಾಣಮ್ಮ 1
ಶ್ರೀಸುಧೀಂದ್ರಕರಕಮಲಜನೆನಿಸುವನ್ಯಾರೆ ಪೇಳಮ್ಮಯ್ಯ
ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೆ ಪೇಳಮ್ಮಯ್ಯ
ಆಶುಗಮನಮತಸ್ಥಾಪಕನೆನಿಸುವನ್ಯಾರೆ ಪೇಳಮ್ಮಯ್ಯ
ಭಾಸುರಜ್ಞಾನಿ ವಿಶೇಷವಾಗಿ ಹರಿದಾಸ್ಯವಪಡೆದಯತೀಶ ಕಾಣಮ್ಮ 2
ಧಾರುಣಿಪತಿಸುತೆತೀರದಿ ನೆಲೆಸಿಹನ್ಯಾರೆ ಪೇಳಮ್ಮಯ್ಯ
ಸಾರಿದ ಭಜಕರ ಬಾರಿಬಾರಿಗೆ ಪೊರೆಯುವನ್ಯಾರೆ ಪೇಳಮ್ಮಯ್ಯ
ಕಾರುಣ್ಯನಿಧಿ ಅಪಾರಮಹಿಮನಿವನ್ಯಾರೆ ಪೇಳಮ್ಮಯ್ಯ
ನಾರಾಯಣ ತಂದೆಶ್ರೀಪತಿವಿಠಲನ ಆರಾಧಿಪ ರಾಘವೇಂದ್ರ ಕಾಣಮ್ಮ 3
***