Saturday 28 December 2019

ವೃಂದಾವನದಲಿ ರಾಜಿಪ ಯತಿವರನ್ಯಾರೇ ankita tande shreepati vittala VRUNDAVANADALI RAAJIPA YATIVARANYARE

Audio by Sri. Jayaramacharya Benkal

ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ            || ಪ ||
ಇಂದಿರೆಯನರಸನ ಚಂದದಿ ಭಜಿಸುವ
ಕುಂದುರಹಿತ ರಾಘವೇಂದ್ರ ಕಾಣಮ್ಮ            || ಅ ||

ಮಂತ್ರಾಲಯಕೃತಮಂದಿರನೆನಿಸುವನ್ಯಾರೇ ಪೇಳಮ್ಮಯ್ಯ
ತಂತ್ರದೀಪಿಕಾ ಗ್ರಂಥಕರ್ತನ್ಯಾರೇ ಪೇಳಮ್ಮಯ್ಯ
ಕಂತುಪಿತನ ಸತ್ಪಂಥದಿ ಭಜಿಸುವನ್ಯಾರೇ ಪೇಳಮ್ಮಯ್ಯ
ಚಿಂತಿತಫಲದ ದುರಂತಶಕ್ತ ಜಯವಂತ ನೀತ ಅಘಶಾಂತ ಕಾಣಮ್ಮ        || ೧ ||

ಶ್ರೀಸುಧೀಂದ್ರಕರಕಮಲಜನೆನಿಸುವನ್ಯಾರೇ ಪೇಳಮ್ಮಯ್ಯ
ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೇ ಪೇಳಮ್ಮಯ್ಯ
ಆಶುಗಮನಮತ ಸ್ಥಾಪಕನೆನಿಸುವನ್ಯಾರೇ ಪೇಳಮ್ಮಯ್ಯ
ಭಾಸುರಜ್ಞಾನ ವಿಶೇಷವಾಗಿ ಹರಿದಾಸ್ಯವ ಪಡೆದ ಯತೀಶ ಕಾಣಮ್ಮ    || ೨ ||

ಧಾರುಣಿಪತಿಸುತೆ ತೀರದಿ ನೆಲೆಸಿಹನ್ಯಾರೇ ಪೇಳಮ್ಮಯ್ಯ
ಸಾರಿದ ಭಜಕರ ಬಾರಿಗೆ ಪೊರೆಯುವನ್ಯಾರೇ ಪೇಳಮ್ಮಯ್ಯ
ಕಾರುಣ್ಯನಿಧಿ ಅಪಾರ ಮಹಿಮನಿವನ್ಯಾರೇ ಪೇಳಮ್ಮಯ್ಯ
ನಾರಾಯಣ ತಂದೆಶ್ರೀಪತಿವಿಠ್ಠಲನ ಆರಾಧಿಪ ರಾಘವೇಂದ್ರ ಕಾಣಮ್ಮ        || ೩ ||
****

ರಾಗ : ಮೋಹನ ತಾಳ : ರೂಪಕ (raga, taala may differ in audio)


ವೃಂದಾವನದಲಿ ರಾಜಿಪ 

ಯತಿವರನ್ಯಾರೇ ಪೇಳಮ್ಮಯ್ಯಾ ।। ಪಲ್ಲವಿ ।।

ಇಂದಿರೆಯರಸನ ಚಂದದಿ ಭಜಿಸುವ ।

ಕುಂದು ರಹಿತ ರಾಘವೇಂದ್ರ ಕಾಣಮ್ಮಾ ।। ಅ ಪ ।।

ಮಂತ್ರಾಲಯ ಕೃತ ಮಂದಿರ-

ನೆನಿಸುವನ್ಯಾರೆ ಪೇಳಮ್ಮಯ್ಯಾ ।

ತಂತ್ರದೀಪಿಕಾ ಮುಖ ಗ್ರಂಥಕರ್ತ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ಕಂತುಪಿತನ ಸತ್ಪಂಥದಿ 

ಭಜಿಸುವನ್ಯಾರೆ ಪೇಳಮ್ಮಯ್ಯಾ ।

ಚಿಂತಿತ ಫಲದ ದುರಂತಶಕ್ತ 

ಜಯವಂತನೀತ 

ಅಘಶಾಂತ ಕಾಣಮ್ಮಾ ।। ಚರಣ ।।

ಶ್ರೀ ಸುಧೀಂದ್ರ ಕರಕಮಲಜ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ತಾ ಸ್ವಪ್ನದಿ ಮಂತ್ರಾಕ್ಷತೆ 

ಕೊಡುತಿಹನ್ಯಾರೇ ಪೇಳಮ್ಮಯ್ಯಾ ।

ಆಶುಗಮನಮತ ಸ್ಥಾಪಕ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ಭಾಸುರಜ್ಞಾನಿ ವಿಶೇಷವಾಗಿ ಹರಿ 

ದಾಸ್ಯವ ಪಡೆದ 

ಯತೀಶ ಕಾಣಮ್ಮಾ ।। ಚರಣ ।।

ಧಾರುಣಿಪತಿಸುತೆ ತೀರದಿ 

ನೆಲೆಸಿಹನ್ಯಾರೆ ಪೇಳಮ್ಮಯ್ಯಾ ।

ಸಾರಿದ ಭಾಜಕರ ಬಾರಿಬಾರಿಗೆ 

ಪೊರೆಯುವನ್ಯಾರೆ ಪೇಳಮ್ಮಯ್ಯಾ ।

ಕಾರುಣ್ಯನಿಧಿ ಅಪಾರ 

ಮಹಿಮ ನಿವನ್ಯಾರೆ ಪೇಳಮ್ಮಯ್ಯಾ ।

ನಾರಾಯಣ ತಂದೆ ಶ್ರೀಪತಿ -

ವಿಠ್ಠಲನ ಆರಾಧಿಪ 

ರಾಘವೇಂದ್ರ ಕಾಣಮ್ಮಾ ।। ಚರಣ ।।

***

kruti by ತಂದೆಶ್ರೀಪತಿವಿಠಲ  

ರಾಗ: ಮೋಹನ /ರೇಗುಪ್ತಿ ತಾಳ: ಅಟ/ರೂಪಕ


ವೃಂದಾವನದಲಿ ರಾಜಿಪ ಯತಿವರನ್ಯಾರೆ ಪೇಳಮ್ಮಯ್ಯ

ಇಂದಿರೆಯರಸನ ಚಂದದಿ ಭಜಿಸುವ

ಕುಂದುರಹಿತ ರಾಘವೇಂದ್ರ ಕಾಣಮ್ಮ ಅ.ಪ

ಮಂತ್ರಾಲಯಕೃತ ಮಂದಿರನೆನಿಸುವನ್ಯಾರೆ ಪೇಳಮ್ಮಯ್ಯ

ತಂತ್ರದೀಪಿಕಾ ಮುಖಗ್ರಂಥಕರ್ತನೆನಿಸುವನ್ಯಾರೆ ಪೇಳಮ್ಮಯ್ಯ

ಕಂತುಪಿತನಸತ್ಪಂಥದಿ ಭಜಿಸುವನ್ಯಾರೆ ಪೇಳಮ್ಮಯ್ಯ

ಚಿಂತಿತಫಲದ ದುರಂತಶಕ್ತ ಜಯವಂತನೀತ ಅಘಶಾಂತ ಕಾಣಮ್ಮ 1

ಶ್ರೀಸುಧೀಂದ್ರಕರಕಮಲಜನೆನಿಸುವನ್ಯಾರೆ ಪೇಳಮ್ಮಯ್ಯ

ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೆ ಪೇಳಮ್ಮಯ್ಯ

ಆಶುಗಮನಮತಸ್ಥಾಪಕನೆನಿಸುವನ್ಯಾರೆ ಪೇಳಮ್ಮಯ್ಯ

ಭಾಸುರಜ್ಞಾನಿ ವಿಶೇಷವಾಗಿ ಹರಿದಾಸ್ಯವಪಡೆದಯತೀಶ ಕಾಣಮ್ಮ 2

ಧಾರುಣಿಪತಿಸುತೆತೀರದಿ ನೆಲೆಸಿಹನ್ಯಾರೆ ಪೇಳಮ್ಮಯ್ಯ

ಸಾರಿದ ಭಜಕರ ಬಾರಿಬಾರಿಗೆ ಪೊರೆಯುವನ್ಯಾರೆ ಪೇಳಮ್ಮಯ್ಯ

ಕಾರುಣ್ಯನಿಧಿ ಅಪಾರಮಹಿಮನಿವನ್ಯಾರೆ ಪೇಳಮ್ಮಯ್ಯ

ನಾರಾಯಣ ತಂದೆಶ್ರೀಪತಿವಿಠಲನ ಆರಾಧಿಪ ರಾಘವೇಂದ್ರ ಕಾಣಮ್ಮ 3

***


No comments:

Post a Comment