..
ಬಲ್ಲವಗಿಲ್ಲಿದೆ ವೈಕುಂಠ ಪ
ಬಲ್ಲವಗೆಲ್ಲೂ ಶ್ರೀಹರಿ ಪೂಜೆ ಅಶÀರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆ ಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು 1
ನಡೆ ಸರ್ವದಾ ಶ್ರೀಹರಿಯ ಯÁತ್ರೆ ನುಡಿ ಸರ್ವ ಶಬ್ಧಾರ್ಥ ಹರಿಯನಾಮಬಿಡದೆ ಶ್ರೀಹರಿಗೆರಗುವ ಚೇತನಜಡಗಳೆಲ್ಲ ಶ್ರೀಹರಿಯ ಪ್ರತಿಮೆಯೆಂದು 2
ನಾರಾಯಣ ಅನಿರುದ್ಧ ರೂಪಗಳಿಂದಶ್ರೀರಮಣನೆ ಭೋಜ್ಯಗಳಲ್ಲಿಪ್ಪಸಾರ ಅಂಶವನು ಪ್ರದ್ಯುಮ್ನ ಸಂಕರುಷಣಮೂರುತಿಯಿಂದ ಭುಂಜಿಪನೆಂದು 3
ಹರಿ ಚರಾಚರ ಸರ್ವ ಜಗದ್ಭರಿತಮುರಹರನಿದ್ದುದೆ ವೈಕುಂಠನರಹರಿಯಲಿ ನವವಿಧ ಭಕುತಿಗೆಸರಿಸಮವೆಂದಿಗಿಲ್ಲವೆಂದು 4
ಜಾಗರಾದಿಗಳಲ್ಲಿ ವಿಶ್ವಾದಿ ಮೂರುತಿಯೋಗಿ ಶ್ರೀಕೃಷ್ಣನೆ ವಿಷಯಂಗಳಭೋಗಿಪನೆಂಬ ಯೋಗಿಗೆ ವಿಹಿತಭೋಗಂಗಳೆಲ್ಲ ಯಾಗಂಗಳೆಂದು 5
***
ಬಲ್ಲವಗಿಲ್ಲಿದೆ ವೈಕುಂಠ || pa ||
ಬಲ್ಲವಗೆಲ್ಲೂ ಶ್ರೀಹರಿ ಪೂಜೆ || A PA ||
ಶರೀರ ಹರಿಯ ಪಟ್ಟಣ ಹೃದಯ
ಸರೋಜವಾತನ ಅರಮನೆ
ಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿ
ದ್ವಾರಪಾಲಕರಾಗಿ ಇಪ್ಪರೆಂದು || 1 ||
ನಡೆ ಸರ್ವದಾ ಶ್ರೀಹರಿಯ ಯಾತ್ರೆ
ನುಡಿ ಸರ್ವ ಶಬ್ಧಾರ್ಥ ಹರಿಯನಾಮ
ಬಿಡದೆ ಶ್ರೀಹರಿಗೆರಗುವ ಚೇತನ
ಜಡಗಳೆಲ್ಲ ಶ್ರೀಹರಿಯ ಪ್ರತಿಮೆಯೆಂದು || 2 ||
ನಾರಾಯಣ ಅನಿರುದ್ಧ ರೂಪಗಳಿಂದ
ಶ್ರೀರಮಣನೆ ಭೋಜ್ಯಗಳಲ್ಲಿಪ್ಪ
ಸಾರ ಅಂಶವನು ಪ್ರದ್ಯುಮ್ನ ಸಂಕರುಷಣ
ಮೂರುತಿಯಿಂದ ಭುಂಜಿಪನೆಂದು || 3 ||
ಹರಿ ಚರಾಚರ ಸರ್ವ ಜಗದ್ಭರಿತ
ಮುರಹರನಿದ್ದುದೆ ವೈಕುಂಠ
ನರಹರಿಯಲಿ ನವವಿಧ ಭಕುತಿಗೆ
ಸರಿಸಮವೆಂದಿಗಿಲ್ಲವೆಂದು || 4 ||
ಜಾಗರಾದಿಗಳಲ್ಲಿ ವಿಶ್ವಾದಿ ಮೂರುತಿ
ಯೋಗಿ ಶ್ರೀಕೃಷ್ಣನೆ ವಿಷಯಂಗಳ
ಭೋಗಿಪನೆಂಬ ಯೋಗಿಗೆ ವಿಹಿತ
ಭೋಗಂಗಳೆಲ್ಲ ಯಾಗಂಗಳೆಂದು || 5 ||
***
ballavagillide vaikuṇṭha || pa ||
ballavagellū śrīhari pūje || A PA ||
śarīra hariya paṭṭaṇa hr̥daya sarōjavātana aramane sūryādi dēvaru cakṣurādigaḷalli dvārapālakarāgi ipparendu || 1 ||
naḍe sarvadā śrīhariya yātre nuḍi sarva śabdhārtha hariyanāma biḍade śrīharigeraguva cētana jaḍagaḷella śrīhariya pratimeyendu || 2 ||
nārāyaṇa anirud’dha rūpagaḷinda śrīramaṇane bhōjyagaḷallippa sāra anśavanu pradyumna saṅkaruṣaṇa mūrutiyinda bhun̄jipanendu || 3 ||
hari carācara sarva jagadbharita muraharaniddude vaikuṇṭha narahariyali navavidha bhakutige sarisamavendigillavendu || 4 ||
jāgarādigaḷalli viśvādi mūruti yōgi śrīkr̥ṣṇane viṣayaṅgaḷa bhōgipanemba yōgige vihita bhōgaṅgaḷella yāgaṅgaḷendu || 5 ||
Plain English
ballavagillide vaikuntha || pa ||
ballavagellu srihari puje || A PA ||
sarira hariya pattana hrdaya sarojavatana aramane suryadi devaru caksuradigalalli dvarapalakaragi ipparendu || 1 ||
nade sarvada srihariya yatre nudi sarva sabdhartha hariyanama bidade sriharigeraguva cetana jadagalella srihariya pratimeyendu || 2 ||
narayana anirud’dha rupagalinda sriramanane bhojyagalallippa sara ansavanu pradyumna sankarusana murutiyinda bhunjipanendu || 3 ||
hari caracara sarva jagadbharita muraharaniddude vaikuntha narahariyali navavidha bhakutige sarisamavendigillavendu || 4 ||
jagaradigalalli visvadi muruti yogi srikrsnane visayangala bhogipanemba yogige vihita bhogangalella yagangalendu || 5 ||
***