Showing posts with label ಶ್ರೀಪೂರ್ಣಬೋಧಮತವಾ ನಂಬಿ pranesha vittala. Show all posts
Showing posts with label ಶ್ರೀಪೂರ್ಣಬೋಧಮತವಾ ನಂಬಿ pranesha vittala. Show all posts

Sunday, 17 November 2019

ಶ್ರೀಪೂರ್ಣಬೋಧಮತವಾ ನಂಬಿ ankita pranesha vittala

by ಪ್ರಾಣೇಶದಾಸರು
ಶ್ರೀ ಪ್ರಾಣೇಶ ದಾಸರ ತಾತ್ವಿಕಹಿನ್ನೆಲೆಯ ರಚನೆಗಳು219

ಶ್ರೀಪೂರ್ಣಬೋಧಮತವಾ ನಂಬಿ |ಶ್ರೀ ಪತಿಯ ಒಲಿಸುವವರು ಕೇಳೀ ಪ

ಆದಿಯಲಿಯಾದ ಚರಿತೆಯನ್ನುಪರ|ಮಾದರದಿಕೇಳಿಸುಜನಾ ||ರಾದವರು ಭಕುತಿಯಿಂದಾ ಮಹ ಪ್ರಳಯ |ವಾದ ತರುವಾಯ ಸೃಷ್ಟಿಯಾಗೇ 1

ಸುರರೆಲ್ಲ ತಮ್ಮ ತಮ್ಮಾ ಸ್ಥಾನದಲಿ |ಸ್ಥಿರರಾಗಿ ಯುವರಾಜ್ಯಕೇ ||ಅರುಹನಾರೆನಲು ಅದಕೇ ಪೇಳಿದನು |ಹರಿಯು ಇಂತುಪಾಯವ ಕೇಳೀ 2

ಒಂದು ದೇಹದಿ ಸರ್ವರೂ ಕ್ರಮನುಸಾರ- |ದಿಂದ ತೆರಳಿರಿ ಚೇತನಾ ||ಕುಂದುವದು ಆವನಿಂದಾ ಅವ ಶ್ರೇಷ್ಠ |ನೆಂದರಿವದೆಂದು ಸರಿದಾ ಕೇಳೀ 3

ಹರಿಆಜÕದಂತೆ ತ್ಯಜಿಸೇ | ಕುಂಟನೂ |ಕುರುಡ ಮೂಕನು ಯನಿಸಿತೂ ||ಹಿರಿಯ ಪವಮಾನ ಬಿಡಲೂ ಎಲ್ಲರೂ |ಅರಿತರೂ ಕುಣುಪವೆಂದೂ ಕೇಳೀ 4

ಮತ್ತೆ ಮೊದಲಂತೆಲ್ಲರೂ ವ್ಯಾಪಿಸಲು |ಬಿತ್ತು ಏಳಲಿಲ್ಲವದೂ ||ಸತ್ಯ ಸಂಕಲ್ಪ ಮರುತಾ ಸೇರಲದು |ತತ್ತಲಿಲ್ಲದೆ ಚಲಿಸಿತೂ ಕೇಳೀ 5

ಅಂದಿನಾರಭ್ಯವಾಗೀ ತಿಳಿಸಿದನು |ಇಂದಿರೇಶನು ಈತನಾ ||ವಂದಿಪರಿಗೊಲಿವೆನೆಂದೂ ಇನ್ನಿದಕೆ |ಸಂದೇಹಉಂಟೆ ಬಂದೂ ಕೇಳಿ 6

ಸ್ವಾಮಿ ಶ್ರೀ ರಾಮನಾಗೇ ಅವತಾರ |ವಾ ಮಾಡಿದನು ಮಾರುತಾ ||ಭೂಮಿಜೆಯದನುಜಒಯ್ಯಲೂ ಆ ಪುರಕೆ |ಪ್ರೇಮದಿಂದಲಿ ಚಿಗಿದನು ಕೇಳೀ 7

ರಾಘವನ ಉಂಗುರವನೂ ವನದೊಳಗೆ |ಬ್ಯಾಗೆ ಇಂದಿರಿಗೆ ಕೊಟ್ಟೂ ||ಆಗಾ ಪೊಳಲನೇ ಸುಟ್ಟೂ ಹಾರಿತ್ವರ|ರಾಗಟಿಯ ಒಡಿಯಗಿತ್ತಾ ಕೇಳೀ 8

ಇಂದ್ರಜಿತು ಮೋಹನಾಸ್ತ್ರಾ ಬಿಡಲಾಗಿ |ಅಂದಗೆಟ್ಟಿತು ಕಪಿ ಕುಲಾ ||ಇಂದಿರೇಶನ ಆಜÕದಿಂ ಆಗ ತ್ವರ- |ತಂದ ಸಂಜೀವನವನೂ ಕೇಳೀ 9

ಅನಿಮಿಷರುಕಪಿಗಳಾಗೀ ನಿರುತ ರಾ- |ಮನ ಭಜಿಪರೀ ಕೆಲಸಕೇ ||ಅನುಕೂಲರೊಬ್ಬರಲ್ಲಾ ಒಬ್ಬ ಅಂ- |ಜನಿ ಸುತನೆ ಸೇವಿ ಮಾಡ್ದಾ ಕೇಳಿ 10

ಉಪಕಾರ ಒಂದಕೆನ್ನಾ ಕೊಟ್ಟ ಮ್ಯಾ- |ಲೆ ಪರಿಮಿತ ಸೇವಿಗುಚಿತಾ ||ಸು ಪರೀಕ್ಷಿಸಿದರು ಕಾಣೇ ಭಳಿರೆ ಯಂ- |ದ ಪರಾಜಿತನು ಮೊಗಳಿದಾ ಕೇಳೀ 11

ಈ ವಾಯು ಒಲಿದನೆಂದೂ ಒಲಿದ ಸು- |ಗ್ರೀವ ವಿಭೀಷಣಗೆ ರಘುಜಾ ||ಶ್ರೀವರನೆ ಕೃಷ್ಣನಾಗೀ ಅವತರಿಸೆ |ಐವರೊಳು ಭೀಮನಾದಾ ಕೇಳೀ 12

ತರಣಿಮೊಮ್ಮಗನ ಸೇವೀ ಈ ವೃಕೋ- |ದರಮಾಳ್ಪನೆಂದುಶೌರಿ||ನರನ ರಥವನು ನಡಿಸಿದಾ ಇಲ್ಲದಿರೆ |ಥರವೆ ಇದು ಪಾಂಡವರಿಗೇ ಕೇಳೀ 13

ಜೀವೇಶರೊಂದೆ ಎಂದೂ ವಾದಿಗಳು |ಭಾವಿಸಿರೆ ಮಧ್ವಮುನಿಯೂ ||ತಾ ವಿರಚಿಸಿ ಸುಗ್ರಂಥವಾ ನಿರ್ದೋಷ |ಗೋವಿಂದನೆಂದರುಹಿದಾ ಕೇಳೀ 14

ಈತ ಮಾಡಿದ ಚರಿತೆಯಾ ಕಡೆಯಾಗಿ |ನಾ ತುತಿಸಲಾರೆ ಸ್ವಲ್ಪಾ ||ವಾತಸ್ಮರಣಿಯ ಮಾಡಲೂ ವೈಕುಂಠ |ಆತು ಇಪ್ಪದು ತಪ್ಪದೂ ಕೇಳೀ15

ದೇಶದೊಳುತುಂಬಿಇಹ್ಯದೂ ಶ್ರೀ ಭಾರ- |ತೀಶ ಮಾಡಿದ ಮಹಿಮಿಯೂ ||ಲೇಶವಾತನ ಚರಿತ್ರೇ ಸ್ಮರಿಸೆ ಪ್ರಾ- |ಣೇಶ ವಿಠ್ಠಲ ಒಲಿವನೂ ಕೇಳೀ 16

ಪ್ರಾಣದೇವರ ಕಥಿಯನು ಕೇಳಿದರೆ |ತಾನೆ ಇಹಪರದಿ ಬಿಡದೇ ||ಪ್ರಾಣೇಶ ವಿಠಲ ಕಾಯ್ವಾ ಇದಕೆ ಅನು- |ಮಾನಲೇಸಿನಿತವಿಲ್ಲವೂ ಕೇಳೀ13
******